HEALTH TIPS

ಗೌರವ ವಂದನೆ: ಶ್ರೀಪದ್ಮನಾಭಸ್ವಾಮಿ ದೇವಸ್ಥಾನ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳನ್ನು ಸ್ಥಗಿತಗೊಳಿಸಲು ತೀರ್ಮಾನ- ಶ್ರೀಚಿತ್ತಿರ ತಿರುನಾಳ್ ಅವರಿಗೆ ನೀಡಿದ ಆಶ್ವಾಸನೆಯೂ ವ್ಯರ್ಥ

ತಿರುವನಂತಪುರಂ: ದೇವಸ್ಥಾನದ ಆಚರಣೆಗಳನ್ನು ಬುಡಮೇಲು ಮಾಡಲು ಗೃಹ ಇಲಾಖೆಯ ನಡೆ ಪ್ರತಿಭಟನೆಗೆ ಕಾರಣವಾಗುತ್ತಿದೆ. ದೇವಸ್ಥಾನದ ವಿಧಿವಿಧಾನಗಳ ಅಂಗವಾಗಿ ರಾಜಮನೆತನದ ಕಾಲದಿಂದಲೂ ಜಾರಿಯಲ್ಲಿದ್ದ ಗಾರ್ಡ್ ಆಫ್ ಹಾನರ್ ರದ್ದುಪಡಿಸಲು ನಿರ್ಧರಿಸಲಾಗಿದೆ.

ಡಿ.5ರಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗಾರ್ಡ್ ಆಫ್ ಹಾನರ್ ರದ್ದುಪಡಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಂಬಂಧ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿಸ್ವನಾಥ್ ಸಿನ್ಹಾ ಅವರ ಪತ್ರವನ್ನು ಪೋಲೀಸ್ ಕೇಂದ್ರ ಕಚೇರಿಯಿಂದ ಸಂಬಂಧಪಟ್ಟ ಠಾಣೆಗಳಿಗೆ ತಲುಪಿಸಲಾಗಿದೆ. ತಿರುವಾಂಕೂರು ಅರಸರು ಭಾರತೀಯ ಒಕ್ಕೂಟದೊಂದಿಗೆ ವಿಲೀನಗೊಂಡಾಗ ಮಾಡಿಕೊಂಡ ಒಪ್ಪಂದಗಳು ಮತ್ತು ಹಿಂದೂ ದೇವಾಲಯಗಳನ್ನು ದೇವಸ್ವಂ ಬೋರ್ಡ್‍ಗೆ ಹಸ್ತಾಂತರಿಸುವಾಗ ಸಹಿ ಹಾಕಲಾದ ಒಪ್ಪಂದದ ನಿಬಂಧನೆಗಳಿಗೆ ವಿರುದ್ಧವಾಗಿದೆ ಸರ್ಕಾರದ ಈ ಕ್ರಮ.


ಗೃಹ ಇಲಾಖೆಯ ಹೊಸ ಪ್ರಸ್ತಾವನೆ ಪ್ರಕಾರ ದೇವಸ್ಥಾನಗಳಲ್ಲಿ ಕಾರ್ಯಕ್ರಮ ಅನಿವಾರ್ಯವಾದರೆ ದೇವಸ್ಥಾನ ಸಮಿತಿಗಳೇ ಪೋಲೀಸರಿಗೆ ಅಗತ್ಯ ಹಣ ನೀಡಬೇಕಾಗುತ್ತದೆ. ಹಿಂದೂ ದೇವಾಲಯಗಳನ್ನು ಸರ್ಕಾರಿ ಸ್ವಾಮ್ಯದ ದೇವಸ್ವಮಂಡಳಿಗೆ ಹಸ್ತಾಂತರಿಸುವಾಗ ಸಹಿ ಹಾಕಲಾದ ಒಡಂಬಡಿಕೆಯಲ್ಲಿನ ಷರತ್ತನ್ನು ಗೃಹ ಇಲಾಖೆ ಕೈಬಿಡುತ್ತಿದ್ದು,  ಅನುಸರಿಸುತ್ತಿರುವ ಆಚರಣೆಗಳಿಗೆ ತೊಂದರೆಯಾಗಲಿದೆ.  ಯಾವುದೇ ನಷ್ಟವಿಲ್ಲದೆ ಅನುಸರಿಸುವ ದೇವಸ್ಥಾನದ ಆಚರಣೆಗಳತ್ತ ಗಮನ ಹರಿಸುವ ಸ್ಥಿತಿಯೇ ಬುಡಮೇಲಾಗುತ್ತಿದೆ.

ಶ್ರೀಪದ್ಮನಾಭಸ್ವಾಮಿ ದೇವಸ್ಥಾನ ಸೇರಿದಂತೆ ಸುಮಾರು 20 ದೇವಸ್ಥಾನಗಳಲ್ಲಿ ಗಾರ್ಡ್ ಆಫ್ ಹಾನರ್ ಅಸ್ತಿತ್ವದಲ್ಲಿದೆ. ಇವುಗಳನ್ನು ಪಾಲಿಸಿದರೆ ಧಾರ್ಮಿಕ ವಿಧಿವಿಧಾನಗಳನ್ನು ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಗೃಹ ಇಲಾಖೆಯ ಸೂಚನೆಗಳು ಸಂಬಂಧಪಟ್ಟ ಠಾಣೆಗಳಿಗೆ ರವಾನೆಯಾದ ಬಳಿಕ ಸ್ವಾತಿ ತಿರುನಾಳ್ ಕಾಲದಿಂದಲೂ ನಡೆದುಕೊಂಡು ಬಂದಿರುವ ಪಲ್ಲಿವೇಟ, ಆರತಿ, ನವರಾತ್ರಿ ಆಚರಣೆ ಸೇರಿದಂತೆ ಹಲವು ದೇವಸ್ಥಾನಗಳ ಧಾರ್ಮಿಕ ವಿಧಿವಿಧಾನಗಳಿಗೆ ವ್ಯತ್ಯಯ ಉಂಟಾಗಲಿದೆ ಎಂದು ಭಕ್ತರು ಆತಂಕ ವ್ಯಕ್ತಪಡಿಸಿದ್ದಾರೆ. ಕೇರಳ-ತಮಿಳುನಾಡು ಪೋಲೀಸರು ನವರಾತ್ರಿ ಉತ್ಸವಗಳಂದು ಕೇರಳ ಗಡಿಯಲ್ಲಿ ಗೌರವಾರ್ಪಣೆ ಮಾಡುತ್ತಾರೆ. ಶ್ರೀಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಮೆರವಣಿಗೆಯಲ್ಲಿ  ರಾಜಮನೆತನದಿಂದಲೂ ಮೌಂಟೆಡ್ ಪೆÇೀಲೀಸರು ಭಾಗವಹಿಸುತ್ತಿದ್ದಾರೆ. ಅಟ್ಟುಕ್ಕಾಲ್ ಪೊಂಗಾಲ  ಹಬ್ಬ ಮತ್ತು ವೆಳ್ಳಾಯಣಿ ಕಲಿಯುಟ್‍ನಿಂದ ಆರಂಭವಾಗುವ ದೇವಾಲಯದ ಸಮಾರಂಭಗಳ ಮೇಲೆ ಪೆÇಲೀಸರು ನಿಗಾ ಇಡಬೇಕಾಗುತ್ತದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries