ತಿರುವನಂತಪುರಂ: ಉತ್ತರಾ ಹತ್ಯೆ ಪ್ರಕರಣದ ಆರೋಪಿ ಸೂರಜ್ ನಕಲಿ ಪ್ರಮಾಣಪತ್ರ ಸಲ್ಲಿಸಿ ತುರ್ತು ಪೆರೋಲ್ ಪಡೆಯಲು ಯತ್ನಿಸಿರುವುದು ಪತ್ತೆಯಾಗಿದೆ.
ಸೂರಜ್ ತನ್ನ ತಂದೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ನಕಲಿ ವೈದ್ಯಕೀಯ ಪ್ರಮಾಣಪತ್ರವನ್ನು ನೀಡಿ ಪೆರೋಲ್ ಗೆ ಯತ್ನಿಸಿರುವುದು ಬಯಲುಗೊಂಡಿದೆ.
ಘಟನೆ ಸಂಬಂಧ ಪೂಜಾಪುರ ಕೇಂದ್ರ ಕಾರಾಗೃಹದ ಅಧೀಕ್ಷಕರ ದೂರಿನ ಮೇರೆಗೆ ಪೂಜಾಪುರ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಮಾಣಪತ್ರ ನಕಲಿ ಎಂದು ಜೈಲು ಅಧಿಕಾರಿಗಳು ಪತ್ತೆ ಹಚ್ಚಿದಾಗ ವಂಚನೆ ವಿಫಲವಾಯಿತು.
ಪತ್ನಿಯನ್ನು ಹಾವು ಕಚ್ಚಿಸಿ ಕೊಂದ ಪ್ರಕರಣದ ಆರೋಪಿ ಸೂರಜ್ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಅಕ್ಟೋಬರ್ 13, 2021 ರಂದು, ನ್ಯಾಯಾಲಯವು ಸೂರಜ್‍ಗೆ 17 ವರ್ಷಗಳ ಜೈಲು ಶಿಕ್ಷೆ ಮತ್ತು ನಂತರ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿತು. ಸದ್ಯ ಸೂರಜ್ ಪೂಜಾಪುರ ಕೇಂದ್ರ ಕಾರಾಗೃಹದಲ್ಲಿದ್ದಾನೆ.
ಸೂರಜ್ ಈ ಹಿಂದೆ ಪೆರೋಲ್‍ಗಾಗಿ ಅರ್ಜಿ ಸಲ್ಲಿಸಿದ್ದ. ಆದರೆ ಅದು ತಿರಸ್ಕøತವಾಗಿತ್ತು. ಇದಾದ ನಂತರ, ತಂದೆ ತೀವ್ರ ಅಸ್ವಸ್ಥರಾಗಿದ್ದು, ಪೆರೋಲ್ ನೀಡಬೇಕು ಎಂದು ಕೋರಿ ಅಧೀಕ್ಷಕರಿಗೆ ಅರ್ಜಿ ಸಲ್ಲಿಸಲಾಗಿತ್ತು.