ಶ್ರೀನಗರ: ದಶಕಗಳ ಕಾಲ ಬಂದೂಕುಗಳು ಮತ್ತು ಕಲ್ಲು ತೂರಾಟಗಳ ಹಿಂಸಾಚಾರ ಪ್ರಕರಣಗಳಿಂದ ತತ್ತರಿಸಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಇದೀಗ ಡ್ರಗ್ಸ್ ಹಾವಳಿ ಹೊಸ ಅಪಾಯ ತಂದೊಡ್ಡಿದೆ.
2021ರಿಂದ ಈ ಪ್ರದೇಶದಲ್ಲಿ ಡ್ರಗ್ಸ್ ಸಂಬಂಧಿತ ಪ್ರಕರಣಗಳ ಸಂಖ್ಯೆ ಸಾಕಷ್ಟು ಏರಿಕೆಯಾಗಿದೆ.
ಎನ್‌ಡಿಪಿಎಸ್ ಕಾಯ್ದೆಯಡಿ ಡ್ರಗ್ಸ್ ಸಂಬಂಧಿತ 6,500 ಪ್ರಕರಣಗಳು ದಾಖಲಾಗಿದ್ದು, 9,424 ಮಂದಿಯನ್ನು ಬಂಧಿಸಲಾಗಿದೆ.
ಕಳೆದ 5 ವರ್ಷಗಳಲ್ಲಿ 8,000 ಕೆ.ಜಿ ಡ್ರಗ್ಸ್ ವಶಪಡಿಸಿಕೊಂಡು ನಾಶಪಡಿಸಲಾಗಿದೆ. ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ 2021ರಲ್ಲಿ 1543 ಪ್ರಕರಣಗಳು ದಾಖಲಾಗಿದ್ದು, 2217 ಮಂದಿಯನ್ನು ಬಂಧಿಸಲಾಗಿದೆ. 2022ರಲ್ಲಿ 1857 ಪ್ರಕರಣ ದಾಖಲಾಗಿದ್ದು, 2755 ಮಂದಿಯನ್ನು ಬಂಧಿಸಲಾಗಿದೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಸಂಸತ್‌ಗೆ ಮಾಹಿತಿ ನೀಡಿದೆ.
2023ರಲ್ಲಿ 2149 ಪ್ರಕರಣ ದಾಖಲಾಗಿ, 3072 ಮಂದಿಯನ್ನು ಬಂಧಿಸಲಾಗಿದೆ. ಪ್ರಸ್ತುತ ವರ್ಷದಲ್ಲಿ ಸೆಪ್ಟೆಂಬರ್‌ವರೆಗೆ 985 ಪ್ರಕರಣ ದಾಖಲಾಗಿದ್ದು, 1380 ಮಂದಿಯನ್ನು ಬಂಧಿಸಲಾಗಿದೆ.