ಕಾಸರಗೋಡು: ಹೈಯರ್ ಸೆಕೆಂಡರಿ ಅಧ್ಯಾಪಕರ ಹುದ್ದೆಗಳಿಗೆ ನೇಮಕಾತಿ ನಡೆಸಲು ಕಾಲವಿಳಂಬದ ಬಗ್ಗೆ ಪರಿಶೀಲನೆ ನಡೆಸುವಂತೆ ಮಾನವಹಕ್ಕು ಆಯೋಗದ ನ್ಯಾಯಾಂಗ ಸದಸ್ಯ ಕೆ. ಬೈಜುನಾಥ್ ಸೂಚಿಸಿದ್ದಾರೆ.
ಎಕನಾಮಿಕ್ಸ್, ಪೊಲಿಟಿಕಲ್ ಸಯನ್ಸ್ ವಿಭಾಗಗಳ ಅಧ್ಯಾಪಕರ ಹುದ್ದೆಗಳಲ್ಲಿ ಪಿಎಸ್‍ಸಿ ರ್ಯಾಂಕ್‍ಲಿಸ್ಟ್‍ನಲ್ಲಿ ಒಳಗೊಂಡ ಉದ್ಯೋಗಾರ್ಥಿಗಳಿಗೆ ನೇಮಕಾತಿ ನೀಡಲು ಸಧ್ಯವಾಗದರುವ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ(ಹೈಯರ್ ಸೆಕೆಂಡರಿ ವಿಭಾಗ)ರು ತೆರವಾಗಿರುವ ಹುದ್ದೆಗಳ ಭರ್ತಿ ಬಗ್ಗೆ ಪನಪೂರ್ವಕವಾಗಿ ಕಾಲವಿಳಂಬ ಮಾಡುತ್ತಿರುವುದಾಗಿ ನೀಡಲಾದ ದೂರಿನ ಬಗ್ಗೆ ತನಿಖೆ ನಡೆಸಲು ಆದೇಶ ಹೊರಡಿಸಲಾಗಿದೆ.
ಎಕನಾಮಿಕ್ಸ್ ವಿಭಾಗ(ಜ್ಯೂನಿಯರ್)ರ್ಯಾಂಕ್ ಪಟ್ಟಿಯಿಂದ ಒಬ್ಬ ಅಭ್ಯರ್ಥಿಯನ್ನೂ ನೇಮಕ ಮಾಡಲಾಗಿಲ್ಲ. ಇದರಲ್ಲಿ 105 ಹುದ್ದೆಗಳು ಖಾಲಿಯಿದೆ. ಪೊಲಿಟಿಕಲ್ ಸಯನ್ಸ್ ವಿಭಾಗದಲಕ್ಲೂ ಇದೇ ಸ್ಥಿತಿಯಿದೆ. ಖಾಲಿ ಹುದ್ದೆಗಳ ಬಗ್ಗೆ ಸಕಾಲಕ್ಕೆ ಪಿಎಸ್‍ಸಿಗೆ ವರದಿ ಮಾಡಬೇಕೆಂಬ ಕಾನೂನು ಜಾರಿಯಲ್ಲಿದ್ದರೂ, ಈ ಹುದ್ದೆಗಳ ಬಗ್ಗೆ ವರದಿ ನೀಡಲಾಗುತ್ತಿಲ್ಲ ಎಂಬುದಾಗಿ ದೂರಿನಲ್ಲಿ ತಿಳಿಸಲಾಗಿದೆ. ದೂರನ್ನು ಪರಿಶೀಲಿಸಿ 30ದಿವಸಗಳೊಳಗೆ ವರದಿ ಸಲ್ಲಿಸುವಂತೆ ಶಿಕ್ಷಣ ನಿರ್ದೇಶಕರಿಗೆ ಆಯೋಗ ಸಊಚಿಸಿದೆ. ಕಾಸರಗೋಡು ಸರ್ಕಾರಿ ಅತಿಥಿಗೃಹದಲ್ಲಿ ಮುಂದಿನ ತಿಂಗಳು ನಡೆಯುವ ಸಿಟ್ಟಿಂಗ್‍ನಲ್ಲಿ ಕೇಸು ಪರಿಗಣನೆಗೆ ಬರಲಿದೆ.