HEALTH TIPS

ಮೂಡಂಬೈಲು ಸರ್ಕಾರಿ ಪ್ರೌಢ ಶಾಲೆಯ ಶತಮಾನೋತ್ಸವ ವರ್ಷಾಚರಣೆಗೆ ಚಾಲನೆ

ಮಂಜೇಶ್ವರ: ಕರ್ನಾಟಕದ ಒಳನಾಡಿನ ಕನ್ನಡ ಮಾಧ್ಯಮ ಶಾಲೆಗಳಿಗಿಂತಲೂ ಅಪ್ರತಿಮ ಸಾಧನೆ, ಹಿರಿಮೆ ಕಾಸರಗೋಡು ಕನ್ನಡ ಶಾಲೆಗಳಿಗಿವೆ. ಕಾಸರಗೋಡಿನ ಕನ್ನಡ ಮಾಧ್ಯಮದ ಶಾಲೆಯಲ್ಲಿರುವ ಅಚ್ಛ ಕನ್ನಡ, ಅಪ್ಪಟ್ಟ ಕನ್ನಡಕ್ಕೆ ತನ್ನದೇ ಆದ ಸ್ಥಾನಮಾನಗಳನ್ನು ಪಡೆದಿದೆ ಎಂದು ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ನುಡಿದರು. 

ಅವರು ಮೂಡಂಬೈಲು ಸರ್ಕಾರಿ ಪ್ರೌಢ ಶಾಲೆಯಲ್ಲಿ ಶತಮಾನೋತ್ಸವದಂಗವಾಗಿ ಭಾನುವಾರ ನಡೆದ ವμರ್Áಚರಣೆಯ ಉದ್ಘಾಟನಾ ಸಮಾರಂಭವನ್ನು ಬೆಳಗ್ಗೆ ಶಾಲೆಯ ಪ್ರಾಂಗಣದಲ್ಲಿ ದೀಪ ಬೆಳಗಿಸಿ, ಉದ್ಘಾಟಿಸಿ, ಮಾತನಾಡಿದರು. 


ಕನ್ನಡದ ಮೊದಲ ರಾಷ್ಟಕವಿ ಮಂಜೇಶ್ವರದ ಗೋವಿಂದ ಪೈ, ತೆಂಕುತಿಟ್ಟಿನ ಪಿತಾಮಹ ಪಾರ್ತಿಸುಬ್ಬ, ಕಯ್ಯಾರ, ಪುಣಿಂಚತ್ತಾಯರು ಮೊದಲಾದ ಹಲವಾರು ಸಾಹಿತಿಗಳು, ಚಿಂತಕರು, ಕಾಸರಗೋಡಿನ ಕನ್ನಡಿಗರು. ಇವರೆಲ್ಲಾ ಪ್ರಪಂಚಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಇವರೆಲ್ಲರಿಗೂ ಕನ್ನಡತನವನ್ನು, ಭದ್ರಬುನಾದಿಯನ್ನು, ಹಾಕಿಕೊಟ್ಟದ್ದು ಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಣ ಕೇಂದ್ರಗಳಾಗಿವೆ ಎಂದು ಹೇಳಿದರು. 

ಹಲವು ಭಾμÉ, ಸಂಸ್ಕøತಿಯ ವೈವಿಧ್ಯಮಯವಾದ ಕಾಸರಗೋಡು ನಿಜಕ್ಕೂ ಪ್ರಪಂಚದಲ್ಲೇ ಒಂದು ಹಿರಿಮೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ಮಂಜೇಶ್ವರ  ಬ್ಲಾಕ್ ಪಂಚಾಯತಿ ಸದಸ್ಯೆ ಅಶ್ವಿನಿ ಎಂ.ಎಲ್ ತೆಂಗಿನ ಗರಿ ಅರಳಿಸಿ ಮೂಡಂಬೈಲು ಶಾಲಾ ಶತಮಾನೋತ್ಸವದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ಬೆಂಬಲ ಸಮಿತಿ ಅಧ್ಯಕ್ಷ ಶಿವರಾಮ ಪದಕಣ್ಣಾಯರು ಶಾಲಾ ಶತಮಾನೋತ್ಸವದ ವಿಜ್ಞಾಪನ ಪತ್ರ ಬಿಡುಗಡೆಗೊಳಿಸಿದರು. ಮಿಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. 


ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯೆ ಕಮಲಾಕ್ಷಿ ಕೆ. ಪಾವೂರು, ಮೀಂಜ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲು,  ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್ ವಿ, ಮಂಜೇಶ್ವರ ಸಹಾಯಕ ಶಿಕ್ಷಣಾಧಿಕಾರಿ ರಾಜಗೋಪಾಲ, ಮಂಜೇಶ್ವರ ಬ್ಲಾಕ್ ಯೋಜನಾ ಸಂಯೋಜಕ ಜಾಯ್ ಜಿ, ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ರಮಾ ಬಾಯಿ  ಟೀಚರ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ಲ  ಪಜಿಂಗಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮ್ ಪ್ರಕಾಶ್ ಆಳ್ವ, ಮಾತೆಯರ ಸಂಘದ ಅಧ್ಯಕ್ಷೆ ಸುಮಿತಾ ಎ.ಎಸ್ ಶುಭಾಸಂಶನೆಗೈದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಮುಖ್ಯೋಪಾಧ್ಯಾಯ ಜಾರ್ಜ್ ಕ್ರಾಸ್ತ ಸಿ.ಎಚ್ ಸ್ವಾಗತಿಸಿ, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಎಂ. ದಾಮೋದರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.  ಮೀಯಪದವು  ಶಾಲಾ ಯುಪಿ ವಿಭಾಗದ ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ ದಡ್ಡoಗಡಿ ವಿಜ್ಞಾಪನಾ ಪತ್ರ ವಾಚಿಸಿ, ಪ್ರಚಾರ ಸಮಿತಿ ಅಧ್ಯಕ್ಷ ಜಗದೀಶ್ ಮೂಡಂಬೈಲು ವಂದಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries