HEALTH TIPS

ಬಳ್ಳಪದವಲ್ಲಿ ವೇದ ನಾದ ಯೋಗ ತರಂಗಿಣಿ-ಕವಿಗೋಷ್ಠಿ

ಬದಿಯಡ್ಕ: ಕಾಲಘಟ್ಟ ಬದಲಾದ ಸನ್ನಿವೇಶದಲ್ಲಿ, ಯಾಂತ್ರೀಕರಣದ ವೇಗದ ಮಧ್ಯೆ ಮನುಷ್ಯತ್ವ ಕಾಣೆಯಾಗಬಾರದು. ಸಂಸ್ಕøತಿಯನ್ನು ಭದ್ರಗೊಳಿಸುವ, ಭಾವನಾವಲಯ ಉದ್ಧೀಪಿಸುವ ನಿಟ್ಟಿನ್ಲಲ್ಲಿ ಕಲೆ, ಸಾಹಿತ್ಯಗಳು ಬೆಂಬಲ ನೀಡುತ್ತದೆ ಎಂದು ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ, ಸಂಶೋಧನಾ ನಿರ್ದೇಶಕ ಡಾ.ರತ್ನಾಕರ ಮಲ್ಲಮೂಲೆ ತಿಳಿಸಿದದರು.

ಬಳ್ಳಪದವು ನಾರಾಯಣೀಯಂ ಸಂಗೀತ ಶಾಲೆ ವೀಣಾವಾದಿನಿಯಲ್ಲಿ ಗುರುವಾರ ಆರಂಭಗೊಂಡ ವೇದ ನಾದ ಯೋಗ ತರಂಗಿಣಿ ಕಾರ್ಯಕ್ರಮ ಹಾಗೂ ಸಂಗೀತ ಸಾಂಸ್ಕøತಿಕ ಭವನ ಬಾಲರಾಮವರಮ್ ಇದರ ಉದ್ಘಾಟನೆಯ ಅಂಗವಾಗಿ ಬೆಳಿಗ್ಗೆ ನಡೆದ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಸಂಸ್ಕಾರವಂತರಾಗಲು, ಭಾಷಾಭಿಮಾನ ಬೆಳೆಯಲು ಸಾಹಿತ್ಯ ಮಹತ್ತರ ಪಾತ್ರ ವಹಿಸುತ್ತದೆ. ಕವಿತೆಯ ಧ್ವನಿ ಪೂರ್ಣವಾಗಿರಬೇಕಿದ್ದು, ಲಾಲಿತ್ಯವಲ್ಲ. ಅದು ವಾಚ್ಯವೂ ಅಲ್ಲ. ಸಮಗ್ರವಾದ ವ್ಯಕ್ತಿತ್ವ ನಿರ್ಮಾಣ ಸಾಹಿತ್ಯ, ಕಲೆಗಳ ಮೂಲಕ ಬಲಪಡೆಯುತ್ತದೆ ಎಂದವರು ತಿಳಿಸಿದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಯುವ ಲೇಖಕಿ, ಕವಯಿತ್ರಿ, ರಾಜಶ್ರೀ ಟಿ.ರೈ.ಪೆರ್ಲ ಅವರು ಮಾತನಾಡಿ, ಸಾಹಿತ್ಯ ಅಧ್ಯಯನ ನಮ್ಮನ್ನು ವಿಶಾಲಗೊಳಿಸುತ್ತದೆ. ನಿಖರ ಆಲೋಚನೆಗಳು,  ಮತ್ತು ಭಾವನೆಗಳನ್ನು ಸಮಾಜದೊಂದಿಗೆ ಹಂಚಿಕೊಳ್ಳುವ ಶ್ರೀಮಂತ ವಿಧಾನವೇ ಸಾಹಿತ್ಯ-ಕವನ-ಕಥಾರೂಪಗಳಾಗಿವೆ. ನಮ್ಮ ಬೆಳವಣಿಗೆಯ ಕೌಶಲ್ಯಗಳನ್ನು ಸುಧಾರಿಸುವುದರ ಜೊತೆಗೆ ಶಬ್ದಕೋಶವೂ ವಿಸ್ಕøತವಾಗಿ ಬೆಳೆಯುತ್ತದೆ. ಕಾಸರಗೋಡಿನ ಕನ್ನಡ-ತುಳು ಸಹಿತ ಬಹುಭಾಷೆಗಳ ಸಾಹಿತ್ಯ ಕೈಂಕರ್ಯಗಳು ಚೋತೋಹಾರಿಯಾದುದು ಎಂದವರು ತಿಳಿಸಿದರು.


ಕವಿಗಳಾದ ನರಸಿಂಹ ಭಟ್ ಏತಡ್ಕ, ಸುಶೀಲಾ ಪದ್ಯಾಣ, ಜೋಸ್ಸ್ನಾ ಕಡಂದೇಲು, ಸುಂದರ ಬಾರಡ್ಕ, ಆಶ್ವಿನಿ ಕೋಡಿಬೈಲು, ಸಂಧ್ಯಾಗೀತ ಭಾಯಾರು, ಸೌಮ್ಯಾ ಪ್ರವೀಣ್, ರೇಖಾ ಅಣಂಗೂರು, ಎಸ್.ಎನ್.ಭಟ್ ಸೈಪಂಗಲ್ಲು, ಸಂಧ್ಯಾ ಕೊರೆಕ್ಕಾನ, ಪ್ರಮೀಳಾ ಚುಳ್ಳಿಕ್ಕಾನ, ಅಮೃತ ಓಟೆಕ್ಕಾಡು, ಸುಶ್ಮಿತಾ ಗೋಸಾಡ, ಪುರುಷೋತ್ತಮ ಭಟ್.ಕೆ. ಸ್ವರಚಿತ ಕವನಗಳನ್ನು ವಾಚಿಸಿದರು.

ಹಿರಿಯ ಸಾಹಿತಿ ಡಾ.ವಸಂತಕುಮಾರ್ ಪೆರ್ಲ, ವೀಣಾವಾದಿನಿಯ ವಿದ್ವಾನ್.ಯೋಗೀಶ ಶರ್ಮಾ ಬಳ್ಳಪದವು, ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿಯ ಕಾರ್ಯದರ್ಶಿ ಅಖೀಲೇಶ್ ನಗುಮುಗಂ ಉಪಸ್ಥಿತರಿದ್ದರು. ವಿóಣು ಶರ್ಮ ಪ್ರಾಥರ್ಧನಾಗೀತೆ ಹಾಡಿದರು. ಯೋಗೀಶ ಶರ್ಮ ಸ್ವಾಗತಿಸಿ, ವಂದಿಸಿದರು.

ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಬ್ರಹ್ಮಶ್ರೀ ಮುಲ್ಲಪಳ್ಳಿ ಕೃಷ್ಣ ನಂಬೂದಿರಿ ಇವರ ನೇತೃತ್ವದಲ್ಲಿ ಗಣಪತಿ ಹವನ, ಲಕ್ಷಾರ್ಚನೆ ನಡೆಯಿತು. ಅಪರಾಹ್ನ ಉದ್ಘಾಟನಾ ಸಮಾರಂಭ ನಡೆಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries