ಎರ್ನಾಕುಳಂ: ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಏಜನ್ಸಿ(ಎನ್‍ಐಎ)ಎರ್ನಾಕುಳಂನ ವಿವಿಧೆಡೆ ದಾಳಿ ನಡೆಸಿದೆ. ಕೊಲೆ ಪ್ರಕರಣದ ಆರೋಪಿಗಳು ಕೇರಳದಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಪಡೆದ ತನಿಖಾ ಸಂಸ್ಥೆ ಗುರುವಾರ ಕಾಯಾಚರಣೆ ಮುಂದುವರಿಸಿದೆ.
ಕೊಲೆ ಕೃತ್ಯದ ಹಿಂದೆ ಪಿಎಫ್‍ಐ ಕೈವಾಡವಿರುವುದನ್ನು ಎನ್‍ಐಎ ಪತ್ತೆಹಚ್ಚಿತ್ತು. ದಾಳಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.