ಕಾಸರಗೋಡು: ಉದ್ಯೋಗ ಭರವಸೆ ನೀಡಿ ಲಕ್ಷಾಂತರ ರೂ. ವಂಚಿಸಿರುವ ಡಿವೈಎಫ್‍ಐ ಮಾಜಿ ನೇತಾರೆ ಸಚಿತಾ ರೈ ವಿರುದ್ಧ ಉದ್ಯೋಗವಂಚನೆಯ ಮತ್ತೊಂದು ಕೇಸು ದಾಖಲಾಗಿದೆ.
ಕಾಸರಗೋಡು ನಗರಠಾಣೆ ವ್ಯಾಪ್ತಿಯ ಕೂಡ್ಲುರಾಮದಾಸ ನಗರ ನಿವಾಸಿ ಯುವತಿ ನೀಡಿರುವ ಕೇಸಿಗೆ ಸಂಬಂಧಿಸಿ ಪ್ರಕರಣ ದಾಖಲಾಗಿದೆ. ಕೇಂದ್ರ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಕ್ಲರ್ಕ್ ಯಾ ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕಿ ಹುದ್ದೆ ದೊರಕಿಸಿಕೊಡುವುದಾಗಿ 13.26ಲಕ್ಷ ರೂ. ಪಡೆದು, ಕೆಲಸ ಗಿಟ್ಟಿಸಿಕೊಡದೆ, ಹಣವನ್ನೂ ವಾಪಾಸುಮಾಡದೆ ವಂಚಿಸಿರುವುದಾಗಿ ಯುವತಿ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. 2022 ಡಿ. 19ರಿಂದ 2024 ಜುಲೈ 14ರ ಕಾಲಾವಧಿಯ ವಿವಿಧ ದಿವಸಗಳಂದು ಸಚಿತಾ ರಐಗೆ ಈ ಹಣ ನೀಡಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ. ಉದ್ಯೋಗ ಭರವಸೆ ನೀಡಿ ಹಲವರಿಂದ ಲಕ್ಷಾಂತರ ರೂ. ಪಡೆದು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಸಚಿತಾ ರೈ ಕಣ್ಣೂರಿನ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗಬಂಧನ ಅನುಭವಿಸುತ್ತಿದ್ದಾಳೆ.