ಕಾಸರಗೋಡು: ಸುಮಾರು ಎರಡು ಕೋಟಿಗೂ ಮಿಕ್ಕಿ ನಷ್ಟ ತಂದೊಡ್ಡಿರುವ ಪೆರ್ಲ ಪೇಟೆಯ ಬೆಂಕಿ ಆಕಸ್ಮಿಕದಲ್ಲಿ ಸಂತ್ರಸ್ತರಾದ ವ್ಯಾಪಾರಿಗಳಿಗೆ ಸರ್ಕಾರ ತಕ್ಷಣ ಪರಿಹಾರ ಕಲ್ಪಿಸುವಂತೆ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಆಗ್ರಹಿಸಿದ್ದಾರೆ.
ಹಲವು ವರ್ಷಗಳಿಂದ ತಮ್ಮ ಸಂಸ್ಥೆಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ವ್ಯಾಪಾರಿಗಳು, ಮಧ್ಯರಾತ್ರಿ ನಡೆದ ದುರ್ಘಟನೆಯಿಂದ ಸರ್ವಸ್ವವನ್ನೂ ಕಳೆದುಕೊಂಡಿದ್ದಾರೆ. ಬೆಂಕಿ ಆಕಸ್ಮಿಕದ ಬಗ್ಗೆ ನಿಗೂಢತೆಯಿದ್ದು, ಸತ್ಯಾಸತ್ಯತೆ ಹೊರಬರಲು ವಿಶೇಷ ತಂಡದಿಂದ ತನಿಖೆ ನಡೆಸಬೇಕಾಗಿದೆ. ಇದೇ ಸಂದರ್ಭ ವ್ಯಪಾರಿಗಳು ತಾತ್ಕಾಲಿಕ ಶೆಡ್ ನಿರ್ಮಿಸಿ ವ್ಯಾಪಾರಕ್ಕೆ ಮುಂದಾಗಿದ್ದು, ತರಕಾರಿ ವ್ಯಾಪಾರಿಯೊಬ್ಬರ ಪ್ರಥಮ ವ್ಯಾಪಾರವನ್ನು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ನಡೆಸಿಕೊಟ್ಟರು.