ಕೋಝಿಕ್ಕೋಡ್: ಮನೆಗೆ ತೆರಳುತ್ತಿದ್ದ ಯೋಧ ನಾಪತ್ತೆಯಾಗಿದ್ದಾರೆ ಎಂದು ದೂರಲಾಗಿದೆ. ಪುಣೆಯ ಆರ್ಮಿ ಸಪೋರ್ಟ್ ಇನ್‍ಸ್ಟಿಟ್ಯೂಟ್‍ನಿಂದ ರಜೆ ಪಡೆದು ಯೋಧ ನಾಪತ್ತೆಯಾಗಿದ್ದಾನೆ.
ಕೋಝಿಕ್ಕೋಡ್ ಎರಂಜಿಕಲ್ ಕಂದಮ್ಕುಲಂಗರ ಚೆರಿಯಕರಮವಳ್ಳಿಯ ಸುರೇಶ್ ಎಂಬುವವರ ಪುತ್ರ ವಿಷ್ಣು ಕಳೆದ ಬುಧವಾರದಿಂದ ನಾಪತ್ತೆಯಾಗಿದ್ದಾರೆ ಎಂದು ಸಂಬಂಧಿಕರು ಪೋಲೀಸ್ ದೂರು ನೀಡಿದ್ದಾರೆ. ಸೋಮವಾರ ವಿಷ್ಣು ತನ್ನ ತಾಯಿಗೆ ಕರೆ ಮಾಡಿ ರಜೆ ಇದ್ದ ಕಾರಣ ಮನೆಗೆ ಬರುವುದಾಗಿ ತಿಳಿಸಿದ್ದ.
ಸಂಬಂಧಿಕರ ಪ್ರಕಾರ ವಿಷ್ಣು ಕೊನೆಯದಾಗಿ ಮಂಗಳವಾರ ಬೆಳಗಿನ ಜಾವ 2.15ಕ್ಕೆ ಮನೆಗೆ ಕರೆ ಮಾಡಿದ್ದರು. ಅಮ್ಮನಿಗೆ ಪೋನ್ ಮಾಡಿ ಕಣ್ಣೂರು ತಲುಪಿರುವುದಾಗಿ ಹೇಳಿದ್ದರು. ಆದರೆ ತಡರಾತ್ರಿ ನಾಪತ್ತೆಯಾದ ಬಳಿಕ ದೂರವಾಣಿಯಲ್ಲಿ ಸಂಪರ್ಕಿಸಲು ಯತ್ನಿಸಿದ್ದು ಸ್ವಿಚ್ ಆಫ್ ಆಗಿತ್ತು. ಬಳಿಕ ಎಲತ್ತೂರು ಪೋಲೀಸರಿಗೆ ದೂರು ನೀಡಲಾಗಿತ್ತು. ಮನೆಯವರ ದೂರಿನ ಮೇರೆಗೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ವಿಷ್ಣು ಪುಣೆ ಆರ್ಮಿ ಸ್ಪೋಟ್ರ್ಸ್ ಇನ್‍ಸ್ಟಿಟ್ಯೂಟ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ವಿಷ್ಣು ನಾಪತ್ತೆಯಾಗಿರುವುದು ಸ್ಪಷ್ಟವಾದ ಬಳಿಕ ಪುಣೆ ಸೇನಾ ಶಿಬಿರದ ಅಧಿಕಾರಿಗಳು ಪೋಲೀಸರಿಗೂ ದೂರು ನೀಡಿದ್ದಾರೆ. ವಿಷ್ಣು ಬಾಕ್ಸಿಂಗ್ ಸ್ಟಾರ್. ವಿಷ್ಟು ಅವರು ಒಂಬತ್ತು ವರ್ಷಗಳ ಹಿಂದೆ ಸೇನೆಗೆ ಸೇರಿದ್ದರು. ಒರಿಸ್ಸಾ ಮತ್ತು ಅಸ್ಸಾಂನಲ್ಲಿ ಕೆಲಸ ಮಾಡಿದ್ದಾರೆ.
ವಿಷ್ಣು ಅವರ ಪೋನ್ ಲೊಕೇಶನ್ ಪುಣೆಯಲ್ಲಿದೆ ಎಂಬ ಮಾಹಿತಿ ಪೋಲೀಸರಿಗೆ ಲಭಿಸಿದೆ. . ಎಟಿಎಂ ಕಾರ್ಡ್‍ನಿಂದ 15,000 ರೂ. ಹಿಂಪಡೆದಿರುವುದು ದೃಢಪಟ್ಟಿದೆ.