ಕಾಸರಗೋಡು: ಪರಿಶಿಷ್ಟ ವರ್ಗ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿ ಕಾಸರಗೋಡಿನ ಕುಂಡಂಕುಳಿಯಲ್ಲಿ ಕಾರ್ಯಾಚರಿಸುತ್ತಿರುವ ಸಾವಿತ್ರಿಭಾಯಿ ಫುಲೆ ಸ್ಮಾರಕ ಆಶ್ರಮ ಶಾಲೆಯ ವಿದ್ಯಾರ್ಥಿಗಳು ಡಿಸೆಂಬರ್ 27, 28 ಮತ್ತು 29 ರಂದು ವಯನಾಡು ಜಿ.ವಿ.ಎಚ್.ಎಸ್‍ನಲ್ಲಿ ನಡೆಯುವ ಸರ್ಗೋತ್ಸವದಲ್ಲಿ ಬಾಗವಹಿಸಲಿದ್ದಾರೆ.
ಸಾವಿತ್ರಿಭಾಯಿ ಫುಲೆ ಸ್ಮಾರಕ ಆಶ್ರಮ ಶಾಲೆಯ 30 ವಿದ್ಯಾರ್ಥಿಗಳು ಹಾಗೂ 4 ಮಂದಿ ಸಿಬ್ಬಂದಿ ಸದಸ್ಯರು ಕುಂಡಂಕುಳಿಯಿಂದ ಸರ್ಗೋತ್ಸವ ನಗರಕ್ಕೆ ಹಾಗೂ ಸರ್ಗೋತ್ಸವ ನಗರದಿಂದ ಹಿಂತಿರುಗಿ ಅಲ್ಲಿನ ವಸತಿ ಕೇಂದ್ರದಿಂದ ಪ್ರತಿದಿನ ಸರ್ಗೋತ್ಸವ ನಡೆಯುವ ಸ್ಥಳಕ್ಕೆ ಸಾಗಿಸಲು ಸಾರಿಗೆಗಾಗಿ ನಾನ್ ಏಸಿ ಬಸ್ಸನ್ನು ಒದಗಿಸಲು ಸಿದ್ಧವಿರುವ ಬಸ್ಸಿನ ಮಾಲೀಕರು ಯಾ ಸಂಸ್ಥೆಗಳಿಗೆ ಕೊಟೇಷನ್ ಆಹ್ವಾನಿಸಲಾಗಿದೆ. ಕೊಟೇಷನ್ ಸ್ವೀಕರಿಸಲು ಡಿಸೆಂಬರ್ 18ರಂದು ಸಂಜೆ 3 ಗಂಟೆ ಕೊನೆಯ ದಿನಾಂಕವಾಗಿರುತ್ತದೆ. ಅಂದು ಸಂಜೆ 3.30ಕ್ಕೆ ಕೊಟೇಷನ್ ತೆರೆಯಲಾಗುವುದು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 290922)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.