HEALTH TIPS

ಚಳಿಗಾಲದಲ್ಲಿ ಈ ಹಣ್ಣುಗಳ ಸೇವನೆ ಬಿಡುವುದು ಉತ್ತಮ..! ಯಾವುದೆಲ್ಲಾ ಗೊತ್ತಾ?

 ಹಣ್ಣುಗಳು ದೇಹದ ಆರೋಗ್ಯಕ್ಕೆ ಬಹಳ ಮುಖ್ಯ ಅನ್ನುವುದನ್ನು ನಾವು ತಿಳಿದಿದ್ದೇವೆ. ಹಣ್ಣುಗಳು ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರಿಂದ ಹಿಡಿದು, ದೇಹಕ್ಕೆ ಅಗತ್ಯವಾಗಿ ಬೇಕಾದ ವಿಟಮಿನ್‌ಗಳು, ಫೋಷಕಾಂಶಗಳನ್ನು ನೀಡುತ್ತವೆ. ಆದ್ರೆ ಕೆಲವೊಂದು ಹಣ್ಣುಗಳನ್ನು ಯಾವ ಸಮಯದಲ್ಲಿ ಸವಿಯಬೇಕು ಯಾವ ಸವಿಯಬಾರದು ಎಂಬುದು ನಿಮಗೆ ಗೊತ್ತಾ?

ಚಳಿಗಾಲದಲ್ಲಿ ನಾವು ಕೆಲವೊಂದು ಹಣ್ಣುಗಳ ಸೇವನೆ ಬಿಡಬೇಕು ಎಂಬ ಸತ್ಯ ನಿಮಗೆ ಗೊತ್ತಾ? ಚಳಿಗಾಲದಲ್ಲಿ ಕೆಲವೊಂದು ಹಣ್ಣುಗಳು ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆಯಂತೆ. ಕೆಲವು ಹಣ್ಣುಗಳ ಸೇವನೆಯು ಅವುಗಳ ತಂಪಾಗಿಸುವ ಗುಣಲಕ್ಷಣಗಳಿಂದಾಗಿ ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಅಥವಾ ಶೀತ ವಾತಾವರಣದಲ್ಲಿ ಹಾಳಾಗುವ ಸಾಧ್ಯತೆ ಹೆಚ್ಚಾಗುತ್ತದೆ.

ಹಾಗಾದ್ರೆ ನಾವಿಂದು ಚಳಿಗಾಲದಲ್ಲಿ ಯಾವ ಹಣ್ಣುಗಳ ಸವಿಯುವುದರಿಂದ ದೂರ ಇರಬೇಕು? ಯಾವ ಹಣ್ಣನ್ನು ನಾವು ಚಳಿಗಾಲದಲ್ಲಿ ಸವಿಯುವುದು ಬಿಡಬೇಕು ಎಂಬುದನ್ನು ತಿಳಿದುಕೊಳ್ಳೋಣ.

ಕಲ್ಲಂಗಡಿ

ಕಲ್ಲಂಗಡಿ ಒಂದು ಹೈಡ್ರೇಟಿಂಗ್ ಹಣ್ಣಾಗಿದ್ದು, ಅದರ ತಂಪಾಗಿಸುವ ಪರಿಣಾಮದಿಂದಾಗಿ ಬೇಸಿಗೆಯಲ್ಲಿ ಸವಿಯುವುದು ಬಹಳ ಉತ್ತಮ. ಇದರ ನೀರಿನಾಂಶವು ಬೇಸಿಗೆಯಲ್ಲಿ ನಿಮ್ಮ ದೇಹಕ್ಕೆ ಮರಳಿ ಶಕ್ತಿ ತುಂಬುತ್ತದೆ, ಆದರೆ ಚಳಿಗಾಲದಲ್ಲಿ ಈ ಕಲ್ಲಂಗಡಿ ನಿಮ್ಮ ದೇಹದ ಉಷ್ಣತೆಯನ್ನು ಮತ್ತಷ್ಟು ಕಡಿಮೆ ಮಾಡಲಿದೆ. ಇದು ಶಿತ, ಉಸಿರಾಟ ಸಮಸ್ಯೆ ಹೆಚ್ಚಿಸಲು ಕಾರಣವಾಗಬಹುದು. ಹಾಗೆ ಜ್ವರ ಹಾಗೂ ಗಂಟಲು ನೀವು ಇರುವವರು ಚಳಿಗಾಲದಲ್ಲಿ ಈ ಕಲ್ಲಂಗಡಿ ಸವಿಯುವುದು ಉತ್ತಮವಲ್ಲ.

ಬಾಳೆಹಣ್ಣುಗಳು

ಬಾಳೆಹಣ್ಣು ಎಲ್ಲಾ ಕಾಲದಲ್ಲೂ ಸವಿಯಬಹುದು ಎಂದು ನೀವು ತಿಳಿದಿದ್ದರೆ ಅದು ತಪ್ಪು, ಬಾಳೆಹಣ್ಣನ್ನು ಕೂಡ ಬೇಸಿಗೆಯನ್ನು ಹೊರತುಪಡಿಸಿ ಚಳಿಗಾಲ ಮತ್ತು ಮಳೆಗಾಲದಲ್ಲಿ ಸವಿಯುವುದು ಉತ್ತಮವಲ್ಲ. ವಿಶೇಷವಾಗಿ ಶೀತಗಳು, ಕೆಮ್ಮು ಅಥವಾ ಉಸಿರಾಟದ ಸಮಸ್ಯೆಗಳಿಗೆ ಒಳಗಾಗುವವರು ಬಾಳೆಹಣ್ಣನ್ನು ಚಳಿಗಾಲದಲ್ಲಿ ಸವಿಯಬಾರದಂತೆ.

ಸಿಟ್ರಸ್ ಹಣ್ಣುಗಳು

ಸಿಟ್ರಿಕ್ ಆಮ್ಲ ಹೊಂದಿರುವಂತಹ ಕಿತ್ತಳೆ, ನಿಂಬೆಹಣ್ಣು ಮತ್ತು ದ್ರಾಕ್ಷಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಆದರೆ ಅವುಗಳ ಆಮ್ಲೀಯ ಗುಣವು ಚಳಿಗಾಲದಲ್ಲಿ ಅತಿಯಾಗಿ ಸೇವಿಸಿದರೆ ಗಂಟಲನ್ನು ಕೆರಳಿಸುತ್ತದೆ. ಶೀತ-ಸಂಬಂಧಿತ ಸಮಸ್ಯೆಗಳ ಹೊಂದಿರುವವರು ಈ ಹಣ್ಣುಗಳಿಂದ ದೂರ ಇರುವುದು ಒಳಿತು.

ಅನಾನಸ್

ಅನಾನಸ್ ಬ್ರೋಮೆಲಿನ್ ಅನ್ನು ಹೊಂದಿರುತ್ತದೆ. ಅದರ ತಂಪಾಗಿಸುವ ಗುಣಲಕ್ಷಣಗಳು ಮತ್ತು ಆಮ್ಲೀಯ ಗುಣವು ಗಂಟಲನ್ನು ಕೆರಳಿಸಬಹುದು, ಅದರಲ್ಲೂ ಚಳಿಗಾಲದಲ್ಲಿ ಇದು ನಿಮ್ಮ ಸಮಸ್ಯೆ ಹೆಚ್ಚಾಗಿಸಬಹುದು.

ಪಪ್ಪಾಯಿ

ಪಪ್ಪಾಯಿಯು ಪೌಷ್ಟಿಕವಾಗಿದ್ದರೂ, ಸಾಂಪ್ರದಾಯಿಕ ಔಷಧ ವ್ಯವಸ್ಥೆಗಳಲ್ಲಿ ಇದನ್ನು ತಂಪಾಗಿಸುವ ಹಣ್ಣು ಎಂದು ವರ್ಗೀಕರಿಸಲಾಗಿದೆ. ಇದು ದೇಹದ ಉಷ್ಣಾಂಶವನ್ನು ಕೆಳಗಿಳಿಸುತ್ತದೆ. ಹೀಗಾಗಿ ಚಾಳಿಗಾಲದಲ್ಲಿ ನಿಮಗೆ ಯಾವುದಾದರು ತಾಪಮಾನ ಸಂಬಂಧಿ ಸಮಸ್ಯೆ ಇದ್ದರೆ ಈ ಹಣ್ಣು ಮಿತವಾಗಿ ಸೇವಿಸಿ.

ದ್ರಾಕ್ಷಿ

ದ್ರಾಕ್ಷಿಗಳು ವಿಶೇಷವಾಗಿ ತಾಜಾವಾಗಿಲ್ಲದಿದ್ದಾಗ, ಚಳಿಗಾಲದಲ್ಲಿ ಉಸಿರಾಟದ ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು. ಅವುಗಳ ಹೆಚ್ಚಿನ ಸಕ್ಕರೆ ಅಂಶವು ಗಂಟಲು ನೋವು, ಶೀತಕ್ಕೆ ಕಾರಣವಾಗುವ ಲೋಳೆಯ ಉತ್ಪಾದನೆಗೆ ಸಹಕಾರಿಯಾಗಲಿದೆ. ಹೀಗಾಗಿ ದ್ರಾಕ್ಷಿ ಸೇವನೆ ಆದಷ್ಟು ಕಡಿಮೆ ಮಾಡಿ.

ಸೀಬೆ ಹಣ್ಣು

ಸೀಬೆ ಹಣ್ಣಿನಲ್ಲಿ ಅತ್ಯಧಿಕ ವಿಟಮಿನ್‌ಗಳಿರುವುದರಿಂದ ಆರೋಗ್ಯಕ್ಕೆ ಬಹಳ ಉತ್ತಮ. ಆದ್ರೆ ಇದು ಚಳಿಗಾಲದಲ್ಲಿ ನಿಮ್ಮ ದೇಹದ ಉಷ್ಣಾಂಶವನ್ನು ಇಳಿಕೆ ಮಾಡಲು ಕಾರಣವಾಗುತ್ತದೆ. ಇದು ಬೇಸಿಗೆಯಲ್ಲಿ ಸವಿಯಲು ಬಹಳ ಉತ್ತಮವಾದ ಹಣ್ಣು. ಹೀಗಾಗಿ ಚಳಿಗಾಲದಲ್ಲಿ ಆದಷ್ಟು ಮಿತವಾಗಿ ಸೇವಿಸಿ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries