ಬದಿಯಡ್ಕ: ಶಿವಳ್ಳಿ ಸಮುದಾಯದ ಸಂಘಟನೆ ಶಿವಳ್ಳಿ ಬ್ರಾಹ್ಮಣ ಸಭಾ (ರಿ) ಕಾಸರಗೋಡು ಇದರ ವತಿಯಿಂದ ವಾರ್ಷಿಕ ಸಾಂಸ್ಕøತಿಕ ಮತ್ತು ಕ್ರೀಡಾ ಉತ್ಸವದ ಸಮಾರೋಪ ಸಮಾರಂಭ ಮತ್ತು ಕೇಂದ್ರದ ಮಹಾಸಭೆ ನ. 30 ಮತ್ತು ಡಿಸೆಂಬರ್ 1 ಭಾನುವಾರ ಎಡನೀರು ಮಠದಲ್ಲಿ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ವೈದ್ಯಕೀಯ ಶಿಬಿರ ಮತ್ತು ವಧು-ವರರ ಅನ್ವೇಷಣೆ/ ಜಾತಕ ವಿಮರ್ಶೆ ಹಮ್ಮಿಕೊಳ್ಳಲಾಗಿತ್ತು. ವೈದ್ಯಕೀಯ ಶಿಬಿರದಲ್ಲಿ 170 ಮಂದಿ ಆರೋಗ್ಯ ತಪಾಸಣೆ ಮತ್ತು ವಧುವರರ ಅನ್ವೇಷಣೆಯಲ್ಲಿ 90 ಮಂದಿ ಭಾಗವಹಿಸಿದ್ದರು. ಎರಡು ದಿನಗಳಲ್ಲಿ ನಡೆದ ಸಮಾರೋಪ ಮತ್ತು ಮಹಾಸಭೆಯಲ್ಲಿ ಒಟ್ಟು 400 ಮಂದಿ ಶಿವಳ್ಳಿ ಸಮಾಜದ ಬಾಂಧವರು ಅತ್ಯುತ್ಸಾಹದಿಂದ ಭಾಗವಹಿಸಿದರು. ಸುಮಾರು ಒಂದು ತಿಂಗಳ ಕಾಲ ನಡೆದ ಈ ವಿವಿಧ ರೀತಿಯ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಾಸರಗೋಡು ವಲಯ ಪ್ರಥಮ ಸ್ಥಾನ, ಏತಡ್ಕ ವಲಯ ದ್ವಿತೀಯ ಸ್ಥಾನ ಪಡೆದುಕೊಂಡರು.ಸಂಘಟನೆಯ ಅಧ್ಯಕ್ಷ ಮಂಜುನಾಥ ತೇರಕುಂಜತ್ತಾಯ, ಕಾರ್ಯದರ್ಶಿ ಚೇತನ ರಾಮ ನೂರಿತ್ತಾಯ, ಖಜಾಂಚಿ ಸೀಮಾ ಬಳ್ಳುಳ್ಳಾಯ , ಶ್ರೀನಿವಾಸ ಅಮ್ಮಣ್ಣಾಯರು ಹಾಗೂ ಎಲ್ಲಾ ಸಮಾಜ ಬಾಂಧವರು ಸಕ್ರಿಯವಾಗಿ ಭಾಗವಹಿಸಿದರು.