HEALTH TIPS

ನೃತ್ಯ ಕಾರ್ಯಾಗಾರಗಳು ಕಲಿಕೆಯ ಅಭಿವೃದ್ಧಿಗೆ ಪ್ರೇರಕ : ಎಡನೀರು ಶ್ರೀ

 ಮಧೂರು: ಮಧೂರು ನಾಟ್ಯಮಂಟಪ ನೃತ್ಯ ಸಂಸ್ಥೆಯು ಎಡನೀರು ಮಠದ ಶ್ರೀ ಭಾರತಿ ಕಲಾಸದನದಲ್ಲಿ ಭರತನಾಟ್ಯ ಕಲಿಯುವ ಮಕ್ಕಳಿಗಾಗಿ ಎರಡು ದಿನಗಳ ನೃತ್ಯ ಶಿಬಿರ ನಡೆಯಿತು.

ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಶಾಸ್ತ್ರೀಯ ಕಲೆಗಳಲ್ಲಿ ಒಂದಾದ ಭರತನಾಟ್ಯ ಕಲಿಕೆಯಲ್ಲಿ  ಮಕ್ಕಳು ತೊಡಗಿಸಿಕೊಳ್ಳುವುದು ತುಂಬಾ ಒಳ್ಳೆಯ ಬೆಳವಣಿಗೆ. ಅದರಲ್ಲೂ ಇಂತಹ ನೃತ್ಯ ಕಾರ್ಯಾಗಾರಗಳು ಕಲಿಕೆಯ ಅಭಿವೃದ್ಧಿಗೆ ಪ್ರೇರಕ ಎಂದು ಹೇಳಿದರು.  

ಶಿಬಿರದ ಸಂಪನ್ಮೂಲ ವ್ಯಕ್ರಿಯಾಗಿ ನಾಟ್ಯರಂಗ ಪುತ್ತೂರು ಇದರ ನೃತ್ಯ ನಿರ್ದೇಶಕಿ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶರಣ್ಯಾ ಕಾರ್ಯಕ್ರಮ ನಿರೂಪಿದರು. ಶಿಬಿರದ ಸಂಯೋಜಕಿ ನಾಟ್ಯಮಂಟಪದ ನಿರ್ದೇಶಕಿ ಸೌಮ್ಯ ಶ್ರೀಕಾಂತ್ ಶಿಬಿರದ ವಿವರಣೆ  ನೀಡುವುದರೊಂದಿಗೆ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries