ಕುಂಬಳೆ: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘಟನೆಯ ಅಧ್ಯಾಪಕರ ಕ್ರೀಡಾಕೂಟವು ಕುಂಬಳೆ ಜಿ.ಎಸ್.ಬಿ.ಎಸ್ ಶಾಲಾ ಮೈದಾನದಲ್ಲಿ ಶನಿವಾರ ಜರಗಿತು. ಕೇಂದ್ರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ರಾವ್ ಪಿ.ಬಿ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಶಾಲಾ ಮುಖ್ಯೋಪಾಧ್ಯಾಯ ವಿಜಯಕುಮಾರ್ ಪಿ ಉದ್ಘಾಟಿಸಿದರು. .ಕನ್ನಡ ಅಧ್ಯಾಪಕರ ಒಗ್ಗಟ್ಟಿಗೆ ಈ ಕ್ರೀಡಾಕೂಟವು ಸಹಕಾರಿಯಾಗಲಿಯೆಂದು ಅವರು ಈ ಸಂದರ್ಭ ತಿಳಿಸಿದರು.
ನಿವೃತ್ತ ದೈಹಿಕ ಶಿಕ್ಷಕ ಶಶಿಕಾಂತ್ ಬಲ್ಲಾಳ್ ಹಾಗೂ ವೆಂಕಟರಮಣ ಭಟ್ ರಾಜ್ಯ ಸಮ್ಮೇಳನದ ಆಮಂತ್ರಣವನ್ನು ಬಿಡುಗಡೆಗೊಳಿಸಿದರು. ಕೇಂದ್ರ ಸಮಿತಿಯ ಉಪಾಧ್ಯಕ್ಷ ಉಮೇಶ, ಪ್ರಭಾವತಿ ಕೆದಿಲಾಯ, ಅಧಿಕೃತ ವಕ್ತಾರÀ ಸುಕೇಶ, ಕೋಶಾಧಿಕಾರಿ ಶರತ್ ಕುಮಾರ್, ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷ ಜಯರಾಮ, ಕಾರ್ಯದರ್ಶಿ ಜೀವನ್ ಕುಮಾರ್ ಉಪಸ್ಥಿತರಿದ್ದರು. ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಪ್ರದೀಪ್ ಕೆ.ವಿ ವಂದಿಸಿದರು. ಸಂಘಟನಾ ಕಾರ್ಯದರ್ಶಿ ಜಬ್ಬಾರ್ ನಿರೂಪಿಸಿದರು.