ಶ್ರೀನಗರ: ಇಲ್ಲಿನ ಎತ್ತರದ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ಯೋಧರೊಬ್ಬರು ಹೃದಯಾಘಾತದಿಂದ ಶುಕ್ರವಾರ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಇಲ್ಲಿನ ಹರ್ವಾನ್ ಅರಣ್ಯ ಪ್ರದೇಶದ ದಚಿಗಾಮ್ ಸಮೀಪದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತಯಬಾ ಉಗ್ರ ಜುನೈದ್ ಅಹಮದ್ ಭಟ್ ಸಾವಿಗೀಡಾಗಿದ್ದ.
ಇಂದು ಬೆಳಿಗ್ಗೆ ಹರ್ವಾನ್ ಪ್ರದೇಶದ ಫಕೀರ್ ಗುಜ್ರಿ, ದಾರಾದಲ್ಲಿ ಭದ್ರತಾ ಪಡೆಗಳು ಹುಡುಕಾಟ ನಡೆಸುತ್ತಿದ್ದಾಗ, 34 ಅಸ್ಸಾಂ ರೈಫಲ್ಸ್‌ನ ಜಸ್ವಿಂದರ್ ಸಿಂಗ್ ಎಂಬುವವರು ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.
ಮಂಗಳವಾರದ ಎನ್‌ಕೌಂಟರ್ ಬಳಿಕ ಭಯೋತ್ಪಾದಕರ ಪತ್ತೆಗಾಗಿ ಭದ್ರತಾ ಪಡೆಗಳು ವಿಶಾಲವಾದ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದವು.