ನವದೆಹಲಿ: ಅರ್ಜಿಗಳ ವಿಚಾರಣೆಯನ್ನು ಮಾಧ್ಯಮಗಳು ವೈಭವೀಕರಿಸಬಾರದು ಹಾಗೂ ತಪ್ಪು ನಿರೂಪಣೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ದೇಶದ ಹಲವು ದೇವಸ್ಥಾನಗಳಲ್ಲಿ 'ವಿಐಪಿ ದರ್ಶನ'ಕ್ಕಾಗಿ ಹೆಚ್ಚುವರಿ ಶುಲ್ಕ ವಿಧಿಸುವ ಪದ್ಧತಿ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಪಿಐಎಲ್ ವಿಚಾರಣೆಗೆ ಸಂಬಂಧಿಸಿ ಕೆಲ ಮಾಧ್ಯಮಗಳು ಪ್ರಕಟಿಸಿದ/ಬಿತ್ತರಿಸಿದ ಸುದ್ದಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಈ ಮಾತು ಹೇಳಿದೆ.
ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರು ಇದ್ದ ಪೀಠ, 'ಪಿಐಎಲ್ ವಿಚಾರಣೆ ವೇಳೆಯ ಕೋರ್ಟ್ ಕಲಾಪ ಕುರಿತು ಸುದ್ದಿಯನ್ನು ಮಾಧ್ಯಮಗಳು ಸಂಪೂರ್ಣ ತಿರುಚಿವೆ' ಎಂದು ಹೇಳಿದೆ.