ಕುಂಬಳೆ: ಕಂಬಾರು ಶ್ರೀದುರ್ಗಾಪರಮೇಶ್ವರಿ ದೇವಾಲಯದಲ್ಲಿ ಜ.28 ರಿಂದ ಫೆ.4ರ ವರೆಗೆ ನಡೆಯಲಿರುವ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಸೋಮವಾರ ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಡೆ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು.
ಶ್ರೀಕಂಬಾರು ಕ್ಷೇತ್ರದ ಪದಾಧಿಕಾರಿಗಳಾದ ಲಕ್ಷ್ಮೀನಾರಾಯಣ ಭಟ್.ನೆರಿಯ, ಎಡಕ್ಕಾನ ಗೋಪಾಲಕೃಷ್ಣ ಭಟ್, ಕುಡಾಲು ಗುತ್ತು ದಿವಾಕರ ಶೆಟ್ಟಿ, ಕೋಳಾರು ಸತೀಶ್ಚಂದ್ರ ಭಂಡಾರಿ, ಕುಡಾಲುಗುತ್ತು ರಾಜಾರಾಮ ಶೆಟ್ಟಿ, ಕುಡಾಲುಗುತ್ತು ಶ್ರೀಧರ ಶೆಟ್ಟಿ, ಸುಖೇಶ್ ಶೆಟ್ಟಿ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.