ಢಾಕಾ: ಭಾರತದಲ್ಲಿನ ಬಾಂಗ್ಲಾದೇಶ ಹೈಕಮಿಷನ್ ಕಚೇರಿ ಮೇಲಿನ ದಾಳಿ ಖಂಡಿಸಿ ಹಾಗೂ ದೇಶದ ಬಾವುಟಕ್ಕೆ ಅವಮಾನಿಸಲಾಗಿದೆ ಎಂದು ಆರೋಪಿಸಿ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ)ಯ ಸಾವಿರಾರು ಕಾರ್ಯಕರ್ತರು, ಬೆಂಬಲಿಗರು ಕಾರುಗಳಲ್ಲಿ ಸಾಗಿ ಬುಧವಾರ ಪ್ರತಿಭಟಿಸಿದರು.
ಮಾಜಿ ಪ್ರಧಾನಿ ಖಲೀದಾ ಜಿಯಾ ನೇತೃತ್ವದ ಬಿಎನ್‌ಪಿಯ ಕಾರ್ಯಕರ್ತರು, ಬೆಂಬಲಿಗರು ರಾಜಧಾನಿ ಢಾಕಾದಿಂದ, ಭಾರತಕ್ಕೆ ಹೊಂದಿಕೊಂಡಿರುವ ದೇಶದ ಪೂರ್ವ ಗಡಿಯ ಅಖೌರಾ ಬಳಿಯ ಇಂಟಿಗ್ರೇಟೆಡ್ ಚೆಕ್ ಪೋಸ್ಟ್(ಐಪಿಸಿ) ವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದರು.
ದಾರಿ ಮಧ್ಯೆ, ಪ್ರತಿಭಟನಕಾರರನ್ನು ಸ್ವಾಗತಿಸಿದ ಜಿಯಾ ಅವರ ಬೆಂಬಲಿಗರು, ಕೆಲ ದೂರದ ವರೆಗೆ ರ‍್ಯಾಲಿಯೊಂದಿಗೆ ಸಾಗಿ, ಭಾರತದ ವಿರುದ್ಧ ಘೋಷಣೆಗಳನ್ನು ಕೂಗಿದರು.