HEALTH TIPS

ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಮಹಿಳಾ ಸದಸ್ಯರಿಂದ ತಾಳಮದ್ದಳೆ

ಮುಳ್ಳೇರಿಯ: ಈಶ್ವರಮಂಗಲ ಶ್ರೀ ಅಯ್ಯಪ್ಪ ಸೇವಾ ಸಮಿತಿ ಬೆಳ್ಳಿಚೆಡವು ಇದರ ದ್ವಿತೀಯ ವóóರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಅಯ್ಯಪ್ಪ ದೀಪೆÇೀತ್ಸವದ ಪ್ರಯುಕ್ತ ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಮಹಿಳಾ ಸದಸ್ಯರಿಂದ ಸಮರ ಸನ್ನಾಹ - ಭೀಷ್ಮ ಸೇನಾಧಿಪಥ್ಯ ಆಖ್ಯಾಯಿಕೆಯ ತಾಳಮದ್ದಳೆ ನಡೆಯಿತು.

ಯಕ್ಷಗುರು ವಿಶ್ವವಿನೋದ ಬನಾರಿ ಅವರ ಮಾರ್ಗದರ್ಶನದಲ್ಲಿ ಜರಗಿದ ತಾಳಮದ್ದಳೆಯ ಹಿಮ್ಮೇಳದಲ್ಲಿ  ಮೋಹನ ಮೆಣಸಿನಕಾನ, ಮತ್ತು ಕುಮಾರಿ ವಿದ್ಯಾಶ್ರೀ ಆಚಾರ್ಯ ಈಶ್ವರಮಂಗಲ ಭಾಗವತರಾಗಿ ಪ್ರಸಂಗ ಮುನ್ನಡೆಸಿದರು. ಚೆಂಡೆ ಮದ್ದಳೆಯಲ್ಲಿ ವಿಷ್ಣುಶರಣ ಬನಾರಿ ಹಾಗೂ ಶ್ರೀಧರ ಆಚಾರ್ಯ ಈಶ್ವರಮಂಗಲ ಸಹಕರಿಸಿದರು.


ಅರ್ಥಧಾರಿಗಳಾಗಿ ಸರಿತಾ ರಮಾನಂದ ರೈ ದೇಲಂಪಾಡಿ, ಶಾಂತಕುಮಾರಿ ದೇಲಂಪಾಡಿ, ಜಲಜಾಕ್ಷಿ ಸತೀಶ್ ರೈ ಬೆಳ್ಳಿಪ್ಪಾಡಿ,ನಳಿನಾಕ್ಷಿ ಹರೀಶ್ ಗೌಡ ಮುದಿಯಾರು, ಸುಜಾತ ಮೋಹನ್ ದಾಸ ರೈ ದೇಲಂಪಾಡಿ, ಶೀಲಾವತಿ ಹೇಮನಾಥ್ ಕೇದಗಡಿ, ಸುಮಲತಾ ಉದಯ್ ಕುಮಾರ್ ದೇಲಂಪಾಡಿ,  ಪವಿತ್ರ ದಿವಾಕರ ಮುದಿಯಾರು,  ಕುಸುಮಾವತಿ ಜಯಪ್ರಕಾಶ್ ಕುತ್ತಿ ಮುಂಡ ಪಾತ್ರಗಳನ್ನು ನಿರ್ವಹಿಸಿದರು. 

ನಾರಾಯಣ ದೇಲಂಪಾಡಿ ಅವರ ಅರ್ಥ ಸಾಹಿತ್ಯ ಪ್ರಸಂಗ ಎಂ ರಮಾನಂದ ರೈ ದೇಲಂಪಾಡಿ ಅವರ ಸಂಯೋಜನೆಯಲ್ಲಿ ಪ್ರಸ್ತುತಗೊಂಡಿದ್ದು  ಜಲಜಾಕ್ಷಿ ರೈ ಪಾತ್ರ ಪರಿಚಯ ಮಾಡಿಕೊಟ್ಟರು.

ಚಂದ್ರಶೇಖರ ಗುರುಸ್ವಾಮಿ ಅವರ ನೇತೃತ್ವದಲ್ಲಿ ಜರಗಿದ ಸಾಂಸ್ಕøತಿಕ ಕಲಾ ಕಾರ್ಯಕ್ರಮವು ರಾಮ ನಾಯ್ಕ ದೇಲಂಪಾಡಿ ಅವರ ಪ್ರಾಯೋಜಕತ್ವದಲ್ಲಿ ನೆರವೇರಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries