ಬದಿಯಡ್ಕ: ಹೈದರಾಬಾದ್ ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿರುವ ಬಹುಜನ ಸಾಹಿತ್ಯ ಅಕಾಡೆಮಿ ವತಿಯಿಂದ ನೀಡಲಾಗುವ ವೈದ್ಯರತ್ನ ದೇಶೀಯ ಪ್ರಶಸ್ತಿಗೆ ಕಾಸರಗೋಡು ಜಿಲ್ಲೆಯ ಬದಿಯಡ್ಕ ಕನ್ನೆಪ್ಪಾಡಿ ಸ್ವಾಮಿಕೃಪಾ ತರವಾಡಿನ ಕೃಷ್ಣನ್ ಕೆ.ಕೆ. ಆಯ್ಕೆಯಾಗಿದ್ದಾರೆ.
ಡಿಸೆಂಬರ್ 15ರಂದು ನವದೆಹಲಿ ಲೋಯಲ್ಲಿ ನಡೆಯಲಿರುವ 17ನೇ ದೇಶೀಯ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಕೃಷ್ಣನ್ ಕೆಕೆ ಅವರು ನೀಡಿದ ಆಯುರ್ವೇದ ಔಷಧದಿಂದ ಅನೇಕರು ರೋಗಮುಕ್ತರಾಗಿದ್ದರು. ಇತ್ತೀಚೆಗೆ ಚಿತ್ರದುರ್ಗದಲ್ಲಿ ನಾಡಿಪರೀಕ್ಷೆ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ್ದರು. ಮೊಗೇರ ಸರ್ವೀಸ್ ಸೊಸೈಟಿ, ಕನ್ನೆಪ್ಪಾಡಿ ಕೊಡ್ಯಮೆ ಅಂತಲ ಮೊಗೇರ ಚಾವಡಿಯ ಪದಾಧಿಕಾರಿಯಾಗಿಯೂ ಇವರು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.