HEALTH TIPS

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎ ಜಯತಿಲಕ್ ರ ಈ ವರ್ಷದ ಹಾಜರಾತಿ ಬಹಿರಂಗ- ಆರ್‍ಟಿಐ ದಾಖಲೆಯಿಂದ ಹೊರಬಿದ್ದ ಸತ್ಯ

ತಿರುವನಂತಪುರಂ: ಸೆಕ್ರೆಟರಿಯೇಟ್ ನಲ್ಲಿ ನಡೆದ ಐಎಎಸ್ ಕದನದ ವೇಳೆ ಮಾಹಿತಿ ಹಕ್ಕು ಕಾಯ್ದೆ ಮೂಲಕ ಮಹತ್ವದ ಮಾಹಿತಿ ಹೊರಬಿದ್ದಿದೆ. ಅಮಾನತುಗೊಂಡ ಐಎಎಸ್ ಅಧಿಕಾರಿ ಎನ್. ಪ್ರಶಾಂತ್ ವಿರುದ್ಧ ವರದಿ ಮಾಡಿದ್ದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಯತಿಲಕ್ ಅವರು 2023ರ ಜನವರಿಯಿಂದ 2024ರ ನವೆಂಬರ್ ವರೆಗಿನ ಅವಧಿಯಲ್ಲಿ ಕೇವಲ 190 ದಿನ ಮಾತ್ರ ಕೆಲಸಕ್ಕೆ ಹಾಜರಾಗಿದ್ದರು ಎಂಬುದು ಆರ್ ಟಿಐ ಮನವಿಯ ಮೂಲಕ ತಿರುವನಂತಪುರಂ ಮೂಲದ ವಿನೋದ್ ನಾರಾಯಣನ್ ಅವರಿಗೆ ಲಭ್ಯವಾಗಿರುವ ಮಾಹಿತಿ. 

ಇಲ್ಲಸಲ್ಲದ ಕರ್ತವ್ಯ ದಾಖಲಿಸಿ ಕಚೇರಿಯಿಂದ ತೆರಳಿರುವುದು ಇದರಿಂದ ಸ್ಪಷ್ಟವಾಗಿದೆ. 10 ದಿನಗಳಿಗಿಂತ ಹೆಚ್ಚಿನ ಹಾಜರಾತಿಯನ್ನು 5 ತಿಂಗಳಲ್ಲಿ ಮಾತ್ರ ದಾಖಲಿಸಲಾಗಿದೆ. ಐಎಎಸ್ ಸಮರದಲ್ಲಿ ಜಯತಿಲಕ್ ಕಚೇರಿಯಲ್ಲಿ ಎಷ್ಟು ದಿನ ಇರಬಹುದಿತ್ತು ಎಂದು ಎನ್ ಪ್ರಶಾಂತ್ ಪ್ರತಿಕ್ರಿಯಿಸಿದ್ದರು.

ಇದೀಗ ಹೊರಬಿದ್ದಿರುವ ಮಾಹಿತಿಯು ಎನ್ ಪ್ರಶಾಂತ್ ಅವರ ನಿಲುವನ್ನು ಖಚಿತಪಡಿಸಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಯತಿಲಕ್ ಮತ್ತು ಕೈಗಾರಿಕಾ ಇಲಾಖೆ ನಿರ್ದೇಶಕ ಕೆ ಗೋಪಾಲಕೃಷ್ಣನ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದಕ್ಕಾಗಿ ಪ್ರಶಾಂತ್ ಅವರನ್ನು ಅಮಾನತುಗೊಳಿಸಲಾಗಿತ್ತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries