ಬದಿಯಡ್ಕ: ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹಾಗೂ ಪ್ರೌಢಶಾಲೆಯ ಆಶ್ರಯದಲ್ಲಿ ಜೈ ತುಲುನಾಡ್ ಕಾಸ್ರೋಡು ವಲಯ ಸಮಿತಿಯ ವತಿಯಿಂದ ಬಲೆ ತುಲು ಲಿಪಿ ಕಲ್ಪುಗ ಕಾರ್ಯಾಗಾರವು ನಡೆಯಿತು. ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತುಲು ಲಿಪಿ ಕಲಿತು ಪರೀಕ್ಷೆ ಬರೆದರು. ಸೋಮವಾರ ಪರೀಕ್ಷೆಯಲ್ಲಿ ಉತ್ತಿರ್ಣರಾದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಕಾಸರಗೋಡಿನ ಶಾಲೆಯಲ್ಲಿ ತುಲು ಲಿಪಿಯನ್ನು ಪ್ರಪ್ರಥಮವಾಗಿ ಕಲಿಸಿದ ಹೆಗ್ಗಳಿಕೆಯು ಮಹಾಜನ ಸಂಸ್ಕøತ ಕಾಲೇಜು ನಿರ್ಚಾಲುಲಿಗೆ ಸಲ್ಲುತ್ತದೆ ಎಂದು ಈ ಸಂದರ್ಭದಲ್ಲಿ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕೆದಿಲಾಯರು ಪ್ರಮಾಣ ಪತ್ರ ವಿತರಿಸಿ ಸಂತಸ ವ್ಯಕ್ತಪಡಿಸಿದರು. ತುಲು ಲಿಪಿ ಅಧ್ಯಾಪಕಿ,ಜೈ ತುಲುನಾಡ್ ಸಂಘಟನೆಯ ಉಪಾಧ್ಯಕ್ಷೆ ವಿನೋದ್ ಪ್ರಸಾದ್ ರೈ, ಕಾಸರಗೋಡು ವಲಯ ಸಮಿತಿಯ ಸದಸ್ಯರು ಹಾಗೂ ತುಲು ಲಿಪಿ ಬ್ರಹ್ಮನೆಂದು ಖ್ಯಾತಿ ಪಡೆದ ಪುಂಡೂರು ವೆಂಕಟರಾಜ ಪುಣಿಂಚತ್ತಾಯರ ಪುತ್ರ ವಿಜಯರಾಜ ಪುಣಿಂಚತ್ತಾಯ ಹಾಗೂ ಶಾಲಾ ಅಧ್ಯಾಪಕಿ ಶೈಲಜಾ ಟೀಚರ್ ಉಪಸ್ಥಿತರಿದ್ದರು.