HEALTH TIPS

ಲೋಕಸಭೆ: ಇಂದಿರಾ ಗಾಂಧಿ ಪತ್ರದೊಂದಿಗೆ ರಾಹುಲ್ ಗೆ ತಿರುಗೇಟು ನೀಡಿದ ಬಿಜೆಪಿ, ಶಿವಸೇನಾ!

ನವದೆಹಲಿ: ವಿ.ಡಿ. ಸರ್ವಾಕರ್ ಅವರನ್ನು ಹೊಗಳಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬರೆದಿರುವ ಪತ್ರವೊಂದನ್ನು ಶಿವಸೇನಾ ಸಂಸದ ಶ್ರೀಕಾಂತ್ ಶಿಂಧೆ ಸದನದಲ್ಲಿ ಉಲ್ಲೇಖಿಸಿದಾಗ ಆಡಳಿತರೂಢ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ವಾಕ್ ಸಮರ ನಡೆದು ಲೋಕಸಭೆ ಶುಕ್ರವಾರ ರಣಾಂಗಣವಾಗಿ ಮಾರ್ಪಟ್ಟಿತು. ರಾಹುಲ್ ಗಾಂಧಿ ಅವರ ಸರ್ವಾಕರ್ ಅವರ ಟೀಕೆ ಕುರಿತು ಮಾತನಾಡಿದ ಶಿಂಧೆ, ಪದೇ ಪದೇ ಸ್ವಾತಂತ್ರ್ಯ ಹೋರಾಟಗಾರ ವಿ. ಡಿ. ಸಾರ್ವಕರ್ ಅವರನ್ನು ಕಾಂಗ್ರೆಸ್ ಟೀಕೆ ಮಾಡುವುದನ್ನು ಪ್ರಶ್ನಿಸಿದರು.

ಬ್ರಿಟಿಷ್ ಸರ್ಕಾರಕ್ಕೆ ಹೆದರದ ವೀರ ಸಾರ್ವಕರ್ ಅವರ ನಡೆಯು ಸ್ವಾತಂತ್ಯ ಚಳುವಳಿಯಲ್ಲಿ ತನ್ನದ ಪ್ರಾಮುಖ್ಯತೆ ಹೊಂದಿದೆ. ಭಾರತದ ಈ ಹೆಮ್ಮೆಯ ಪುತ್ರನ ಜನ್ಮ ಶತಮಾನೋತ್ಸವವನ್ನು ಆಚರಿಸುವ ಯೋಜನೆಗಳು ಯಶಸ್ವಿಯಾಗಲಿ ಎಂದು ಬಯಸುತ್ತೇನೆ ಎಂಬ ಇಂದಿರಾ ಗಾಂಧಿ ಅವರ ಪತ್ರವನ್ನು ಸದನದಲ್ಲಿ ಓದಿದ ಶಿಂಧೆ, ನಿಮ್ಮ ಅಜ್ಜಿ ಇಂದಿರಾ ಗಾಂಧಿ ಕೂಡ ಸಾವರ್ಕರ್ ಅವರನ್ನು ಹೊಗಳಿದ್ದು, ಸಂವಿಧಾನಕ್ಕೆ ವಿರುದ್ಧವಾಗಿದ್ರಾ? ಎಂದು ರಾಹುಲ್ ಗಾಂಧಿ ಅವರನ್ನು ಕೇಳಿದರು. ಆಗ ಪ್ರತಿಕ್ರಿಯಿಸಲು ರಾಹುಲ್ ಗಾಂಧಿ ಎದ್ದುನಿಂತಾಗ, ಆಡಳಿತಾರೂಢ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ರಾಹುಲ್ ಗಾಂಧಿ ಅವರಿಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ತೆರಳಿದರು. ಈ ಗದ್ದಲದ ನಡುವೆಯೂ ಸ್ಪೀಕರ್ ಪೀಠದಲ್ಲಿದ್ದ ಕೃಷ್ಣ ಪ್ರಸಾದ್ ತೆನ್ನೆಟಿ, ಶಿಂಧೆ ತಮ್ಮ ಭಾಷಣವನ್ನು ಮುಗಿಸಿದ ನಂತರವೇ ಗಾಂಧಿಗೆ ಪ್ರತಿಕ್ರಿಯಿಸಲು ಅವಕಾಶ ನೀಡಲಾಗುವುದು ಎಂದು ಹೇಳಿದರು. ಮಾತು ಮುಂದುವರೆಸಿದ ಶಿಂಧೆ, ಕಾಂಗ್ರೆಸ್ ನಾಯಕ ಸಾಂವಿಧಾನಿಕ ವಿಷಯಗಳನ್ನು ಹೊರತುಪಡಿಸಿ ಎಲ್ಲದರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಗದ್ದಲದ ನಡುವೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಸಾರ್ವಕರ್ ಟ್ರಸ್ಟ್ ಗೆ ಇಂದಿರಾ ಗಾಂಧಿ ಅನುದಾನ ನೀಡಿದ್ದರು. ಕಾಂಗ್ರೆಸ್ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ರಾಹುಲ್ ಗಾಂಧಿ ಸಾರ್ವಕರ್ ಆಗಲು ಸಾಧ್ಯವಿಲ್ಲ ಎಂದು ಹೇಳಿದರು. ಬಳಿಕ ಮಾತನಾಡಿದ ರಾಹುಲ್ ಗಾಂಧಿ, ಸಾರ್ವಕರ್ ಕುರಿತ ಅಭಿಪ್ರಾಯಗಳನ್ನು ಇಂದಿರಾ ಗಾಂಧಿ ಬಳಿ ಕೇಳಿದ್ದೇನೆ. ಬ್ರಿಟಿಷರ ಬಳಿ ಸಾರ್ವಕರ್ ಕ್ಷಮೆಯಾಚಿಸಿದ್ದನ್ನು ಹೇಳಿದ್ದಾರೆ. ಗಾಂಧಿ, ನೆಹರು ಜೈಲಿಗೆ ಹೋಗಿದ್ದರು. ಆದರೆ ಸಾರ್ವಕರ್ ಬ್ರಿಟಿಷರ ಕ್ಷಮೆಯಾಚಿಸಿದ್ದರು ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries