ನವದೆಹಲಿ: 'ಮಾಲಿನ್ಯದಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಗೆ ಭೇಟಿ ನೀಡಲು ನಾನು ಇಚ್ಚಿಸುವುದಿಲ್ಲ' ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 'ಇಲ್ಲಿ ವಾಸಿಸಲು ನನಗೆ ಕಿಂಚಿತ್ತು ಇಷ್ಟವಿಲ್ಲ. ಇಲ್ಲಿನ ಮಾಲಿನ್ಯದಿಂದಾಗಿ ನಾನು ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತೇನೆ' ಎಂದು ಹೇಳಿದರು.
'ಪ್ರತಿ ಬಾರಿ ದೆಹಲಿಗೆ ಭೇಟಿ ನೀಡಿದಾಗ ಇಲ್ಲಿ ತಂಗಬೇಕೋ ಅಥವಾ ಹೊರಡಬೇಕೊ ಎಂಬ ಬಗ್ಗೆ ಯೋಚಿಸುತ್ತೇನೆ' ಎಂದು ಹೇಳಿದರು.
ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ ಮಾಲಿನ್ಯವನ್ನು ತಹಬದಿಗೆ ತರಬಹುದು ಎಂದೂ ಸಲಹೆ ನೀಡಿದರು.
'ಭಾರತವು ₹22 ಲಕ್ಷ ಕೋಟಿ ಮೌಲ್ಯದ ಪಳೆಯುಳಿಕೆ ಇಂಧನಗಳನ್ನು ಆಮದು ಮಾಡಿಕೊಳ್ಳುತ್ತಿದೆ' ಎಂದು ಇದೇ ವೇಳೆ ತಿಳಿಸಿದರು.
ಮಂಗಳವಾರ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತುಸು ಸುಧಾರಿಸಿದ್ದು, ಎಕ್ಯೂಐ 274ಕ್ಕೆ ತಲುಪಿದೆ.