ದುಬೈ: ಹೂತಿ ಬಂಡುಕೋರರು ಮಧ್ಯ ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದ ಸ್ವಲ್ಪ ಸಮಯದ ನಂತರ ಬಂಡುಕೋರರ ಹಿಡಿತದಲ್ಲಿರುವ ಯೆಮೆನ್‌ನ ರಾಜಧಾನಿ ಮೇಲೆ ತೀವ್ರ ವೈಮಾನಿಕ ದಾಳಿಗಳು ನಡೆದಿವೆ.
ದಶಕದಿಂದ ಹೂತಿ ಹಿಡಿತದಲ್ಲಿರುವ ಯೆಮೆನ್ ರಾಜಧಾನಿ ಸನಾ ನಗರದ ಮೇಲೆ ಸರಣಿ ದಾಳಿ ನಡೆಸಿರುವುದು ಯಾರೆಂದು ಸದ್ಯಕ್ಕೆ ಸ್ಪಷ್ವವಾಗಿಲ್ಲ.
ಕೆಂಪು ಸಮುದ್ರದ ಕಾರಿಡಾರ್‌ನಲ್ಲಿ ಹಡಗು ಸಾಗಣೆಯ ಮೇಲೆ ಹೂತಿ ಬಂಡುಕೋರರು ದಾಳಿ ನಡೆಸಿದ್ದರಿಂದಾಗಿ ಸುಮಾರು ಒಂದು ವರ್ಷದಿಂದ ಅಮೆರಿಕದ ಪಡೆಗಳು ಹೂತಿಗಳ ಮೇಲೆ ದಾಳಿಗಳನ್ನು ಆರಂಭಿಸಿವೆ. ಇಂದಿನ ದಾಳಿ ಬಗ್ಗೆ ಅಮೆರಿಕ ಯಾವುದೇ ಸ್ಪಷ್ಟನೆ ನೀಡಿಲ್ಲ.
ಯೆಮೆನ್‌ನಿಂದ ಉಡಾಯಿಸಲ್ಪಟ್ಟ ಕ್ಷಿಪಣಿಯನ್ನು ನಮ್ಮ ದೇಶದೊಳಕ್ಕೆ ಪ್ರವೇಶಿಸುವ ಮೊದಲೇ ಹೊಡೆದುರುಳಿಸಲಾಯಿತು ಎಂದು ಇಸ್ರೇಲ್ ಹೇಳಿಕೆ ಬಿಡುಗಡೆ ಮಾಡಿದ ಬೆನ್ನಲ್ಲೇ ಈ ದಾಳಿ ನಡೆದಿದೆ.