HEALTH TIPS

ಕಾಸರಗೋಡಿನಲ್ಲಿ ಭಾಷಾ ಸಾಮರಸ್ಯಕ್ಕೆ ಭಾಷಾ ನಿರ್ದೇಶಕರ ನೇಮಕ ಬಗ್ಗೆ ಸರಕಾರದ ಗಮನ ಸೆಳೆಯುವುದು: ಡಾ. ಪುರುಷೋತ್ತಮ ಬಿಳಿಮಲೆ

ಬದಿಯಡ್ಕ : ಗಡಿನಾಡಿನಲ್ಲಿ ಭಾಷಾ ಸಮರಸ್ಯೆವನ್ನು ಕಾಪಾಡುವ ಸಲುವಾಗಿ ಭಾಷಾ ನಿರ್ದೇಶಕರನ್ನು ನೇಮಿಸುವ ಸಲುವಾಗಿ ರಾಷ್ಟ್ರಪತಿಯವರಿಗೆ ಮನವಿ ಮಾಡಲು ಕರ್ನಾಟಕ ಸರಕಾರದ ಗಮನಕ್ಕೆ ತರುವುದಾಗಿ ಕರ್ನಾಟಕ ಕನ್ನಡ ಅಭಿವೃದ್ಧಿ ಪ್ರಾ„ಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.

ಅವರು ಗುರುವಾರ ಬಳ್ಳಪದವು ನಾರಾಯಣೀಯಂನಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಗುರುವಾರ ಅಪರಾಹ್ನ ನಡೆದ ವೇದ ನಾದ ಯೋಗ ತರಂಗಣಿ ಉದ್ಘಾಟನಾ ಸಮಾರಂಭದಲ್ಲಿ ್ಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.


ಗಡಿನಾಡಿನ ಮಕ್ಕಳ ಮೇಲೆ ಯಾವುದೇ ಭಾಷಾ ಹೇರಿಕೆ ಸಲ್ಲದ್ದು, ಭಾಷಾ ಸಾಮರಸ್ಯವನ್ನು ಕಾಪಾಡಬೇಕು. ಹೆಚ್ಚು ಭಾಷೆಗಳನ್ನು ಕಲಿಯುವುದರಿಂದ ಜ್ಞಾನ ಹೆಚ್ಚಾಗುತ್ತದೆ. ಕಾಸರಗೋಡು ತುಳು ಸಂಸ್ಕøತಿಯ ಮೂಲವಾಗಿದೆ. ಭಾರತೀಯ ಸಂಸ್ಕøತಿಯ ಮೂಲ ಅರ್ಥದ ಪರಂಪರೆಯನ್ನು ಉಳಿಸಬೇಕು ಈ ನಿಟ್ಟಿನಲ್ಲಿ ಇಲ್ಲಿ ನಡೆಯುವಂತಹ ಕಾರ್ಯಕ್ರಮ ಶ್ಲಾಘನೀಯವಾಗಿದೆ. ರಾಜಕೀಯ ಧೋರಣೆಗೆ ಮೀರಿ ಇಂತಹ ಸಂಸ್ಥೆಗಳಿಗೆ ಅನುದಾನ ನೀಡುವಲ್ಲಿ ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.


ಕಾರ್ಯಕ್ರಮದಲ್ಲಿ ಕುಂಬ್ಡಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಮೀದ್ ಪೆÇಸಳಿಕೆ ಅಧ್ಯಕ್ಷತೆ ವಹಿಸಿ ಮಾತನಾಡಿದರು

ಈ ಸಂದರ್ಭದಲ್ಲಿ ಉದುಮ ಶಾಸಕ ನ್ಯಾಯವಾದಿ ಸಿ.ಎಚ್.ಕುಂಞಂಬು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮತನಾಡಿ, ಕಾಸರಗೋಡು ಬಹುಭಾಷೆಯೊಂದಿಗೆ ಕಲೆ ಸಾಹಿತ್ಯಗಳಿಂದ ಕೂಡಿದ ಕೇಂದ್ರವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರವೀಶ ತಂತ್ರಿ ಕುಂಟಾರು, ಶಿವಶಂಕರ ನೆಕ್ರಾಜೆ, ಆನಂದ ಕೆ. ಮವ್ವಾರು, ಅಬ್ದುಲ್ ರಝಾಕ್, ನಾಗರಾಜ ಉಪ್ಪಂಗಳ ಮತ್ತಿತರರು ಮಾತನಾಡಿದರು. ಆರಂಭದಲ್ಲಿ ಸಂಗೀತ ಶಿಕ್ಷಣ ಸಂಸ್ಥೆಯ ಸಂಚಾಲಕ ವಿದ್ವಾನ್ ಯೋಗೀಶ ಶರ್ಮಾ ಬಳ್ಳಪದವು ಪ್ರಾಸ್ತಾವಿಕವಾಗಿ ಮಾತಾಡಿ ರಾಜಾರಾಮ ಪೆರ್ಲ ಸ್ವಾಗತಿಸಿದರು. ವಯಲಿನ್ ವಿದ್ವಾಂಸ ಪ್ರಭಾಕರ ಕುಂಜಾರು ವಂದಿಸಿದರು. ಬಳಿಕ ವಿಚಾರ ಸಂಕಿರಣ ನಡೆಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries