ಕಾಸರಗೋಡು: ಕೇರಳದ ದೃಷ್ಟಿ ವಿಕಲಚೇತನರ ಅತಿದೊಡ್ಡ ಸಂಘಟನೆ ಕೇರಳ ಫೆಡರೇಶನ್ ಆಫ್ ಬ್ಲೈಂಡ್ ಕಾಸರಗೋಡು ಜಿಲ್ಲಾ ಘಟಕದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಂತ್ವನಂ ವಿಶೇಷ ಕೂಟದ ಪ್ರಥಮ ಉದ್ಯಮವಾಗಿರುವ ಮಧೂರು ಪರಿಮಳ ಅಗರಬತ್ತಿ ತಯಾರಿಯ ಮೈಕ್ರೋ ಎಂಟರ್‍ಪ್ರೈಸ್ ಘಟಕ ಕಾರ್ಯಾರಂಭಗೊಳಿಸಿದೆ.
ಮಧೂರು ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಸುಮಾ ಅವರು ಅಗರಬತ್ತಿ ತಯಾರಿಕಾ ಕಾರ್ಯಾಚರಣೆಯ ಮೈಕ್ರೋ ಎಂಟರ್‍ಪ್ರೈಸ್ ಘಟಕವನ್ನು ಔಪಚಾರಿಕವಾಗಿ ಉದ್ಘಾಟಿಸಿದರು.
ಸಂಸ್ಥೆಯ ಲಾಂಛನವನ್ನು ಕೇರಳ ಅಂಧರ ಒಕ್ಕೂಟದ ರಾಜ್ಯ ಅಧ್ಯಕ್ಷ ಡಾ.ಸಿ.ಹಬೀಬ್ ಅನಾವರಣಗೊಳಿಸಿದರು. ಸಂಚಾಲಕ ಶಿವರಾಜ್ ಪಿ ಅಧ್ಯಕ್ಷತೆ ವಹಿಸಿದ್ದರು. ಕೇರಳ ಅಂಧರ ಒಕ್ಕೂಟದ ಜಿಲ್ಲಾಧ್ಯಕ್ಷ ಸತೀಶನ ಬೇವಿಂಜ ಹಾಗೂ ಮಧೂರು ಕುಟುಂಬಶ್ರೀ ಸಿಡಿಎಸ್‍ಎಂಇಸಿ ಶ್ರೀಮತಿ ಸುನೀತಾ ಉಪಸ್ಥಿತರಿದ್ದರು. ಕೇರಳ ಅಂಧರ ಒಕ್ಕೂಟದ ಸದಸ್ಯ ಶ್ರೀ ಸಜಿತ್ ಕೆ.ಟಿ ಅವರು ಉಪಕ್ರಮದ ಮುಂದಿನ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ನೆರೆಹೊರೆ ಕರೆ ಕುಟದ ಜಂಟಿ ಸಂಚಾಲಕ ನಾರಾಯಣನ್ ಸಿ. ಎಚ್ ಸ್ವಾಗತಿಸಿದರು. ಸಂಸ್ಥೆಯ ಕಾರ್ಯದರ್ಶಿ ಕಮಲರಾಜ್ ವಂದಿಸಿದರು.