ಮಾಸ್ಕೊ: 'ರಷ್ಯಾ ಸೇನೆಯ ಅಣು, ಜೈವಿಕ ಮತ್ತು ರಾಸಾಯನಿಕ ರಕ್ಷಣಾ ಪಡೆಗಳ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಇಗೋರ್ ಕಿರಿಲೊವ್ ಅವರ ಹತ್ಯೆ ಸಂಬಂಧ ಶಂಕಿತ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ' ಎಂದು ರಷ್ಯಾದ ಫೆಡೆರಲ್ ಸೆಕ್ಯುರಿಟಿ ಸರ್ವೀಸ್ (ಎಫ್‌ಎಸ್‌ಬಿ) ಬುಧವಾರ ಹೇಳಿದೆ.
ವ್ಯಕ್ತಿಯ ಹೆಸರನ್ನು ಎಫ್‌ಎಸ್‌ಬಿ ಬಹಿರಂಗಪಡಿಸಲಿಲ್ಲ. 'ವ್ಯಕ್ತಿಯು 1995ರಲ್ಲಿ ಜನಿಸಿದ್ದಾನೆ. ಆತ ಉಜ್ಬೇಕಿಸ್ತಾನದ ಪ್ರಜೆಯಾಗಿದ್ದು, ತನ್ನನ್ನು ಉಕ್ರೇನ್‌ನ ವಿಶೇಷ ಸೇವೆಯು ಈ ಕೆಲಸಕ್ಕೆಂದೇ ನೇಮಿಸಿಕೊಂಡಿತ್ತು ಎಂದು ಹೇಳಿಕೊಂಡಿದ್ದಾರೆ' ಎಂದು ಎಫ್‌ಎಸ್‌ಬಿ ತಿಳಿಸಿದೆ.
'ಇಗೋರ್ ಕಿರಿಲೊವ್ ಅವರನ್ನು ಹತ್ಯೆ ಮಾಡಿದರೆ, ಯುರೋಪಿಯನ್ ಯೂನಿಯನ್‌ನ ದೇಶಗಳಲ್ಲಿ ವಾಸ ಹಾಗೂ 1 ಲಕ್ಷ ಡಾಲರ್ ಅನ್ನು (ಸುಮಾರು ₹84.9 ಲಕ್ಷ) ಬಹುಮಾನವಾಗಿ ನೀಡಲಾಗುವುದು ಎಂದು ಈ ವ್ಯಕ್ತಿಗೆ ಉಕ್ರೇನ್ ಆಮಿಷ ಒಡ್ಡಿತ್ತು' ಎಂದೂ ಎಫ್‌ಎಸ್‌ಬಿ ಹೇಳಿದೆ.