ತಿರುವನಂತಪುರಂ: ಆಹಾರ ಪದಾರ್ಥಗಳನ್ನು ಕಟ್ಟಲು ಬಳಸುವ ಪ್ಯಾಕಿಂಗ್ ಸಾಮಗ್ರಿಗಳಿಗೆ ಸಂಬಂಧಿಸಿದಂತೆ ಆಹಾರ ಸುರಕ್ಷತೆಯ ಸಹಾಯಕ ಆಯುಕ್ತರು ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.
ಗೂಡಂಗಡಿಗಳಂತಹ ಸಣ್ಣ ವ್ಯಾಪಾರ ಸಂಸ್ಥೆಗಳು ಆಹಾರ ಪದಾರ್ಥಗಳನ್ನು ಸುತ್ತಲು ಪತ್ರಿಕೆಯಂತಹ ಆಹಾರೇತರ ಪ್ಯಾಕಿಂಗ್ ವಸ್ತುಗಳನ್ನು ಬಳಸುತ್ತಿರುವುದನ್ನು ಗಮನಿಸಲಾಗಿದೆ. ಇಂತಹ ವಸ್ತುಗಳನ್ನು ಬಳಸುವುದರಿಂದ ಆರೋಗ್ಯಕ್ಕೆ ಹಾನಿಕರವಾದ ಸೀಸ ಮತ್ತು ಬಣ್ಣಗಳಂತಹ ರಾಸಾಯನಿಕಗಳು ನೇರವಾಗಿ ಆಹಾರದಲ್ಲಿ ಬೆರೆಯಲ್ಪಡುತ್ತದೆ. ಅಷ್ಟೇ ಅಲ್ಲದೆ, ಇದು ರೋಗ-ವಾಹಕ ಸೂಕ್ಷ್ಮಾಣು ಜೀವಿಗಳ ಹರಡುವಿಕೆಗೆ ಕಾರಣವಾಗಬಹುದು ಎಂಬ ವೈಜ್ಞಾನಿಕ ವರದಿಯೂ ಗಮನಾರ್ಹ.
ಎಣ್ಣೆಯುಕ್ತ ಆಹಾರದಿಂದ ಎಣ್ಣೆಯನ್ನು ತೆಗೆದುಹಾಕಲು ಪತ್ರಿಕೆಗಳನ್ನು ಬಳಸಕೂಡದು. ಆಹಾರ ಪ್ಯಾಕೇಜಿಂಗ್ ಮತ್ತು ಶೇಖರಣೆಯನ್ನು ಸುರಕ್ಷಿತ ಮತ್ತು ಆಹಾರ-ಸುರಕ್ಷಿತ ರೀತಿಯಲ್ಲಿ ಮಾಡಬೇಕು. ಇದಕ್ಕಾಗಿ ಆಹಾರ ದರ್ಜೆಯ ಕಂಟೈನರ್ ಗಳನ್ನು ಬಳಸಬೇಕು ಎಂದು ಆಹಾರ ಸುರಕ್ಷತೆ ಸಹಾಯಕ ಆಯುಕ್ತರು ಮಾಹಿತಿ ನೀಡಿದ್ದಾರೆ.