ಭಾರತೀಯ ಪ್ರಜೆಗಳಿಗೆ ಆಧಾರ್ ಕಾರ್ಡ್ (Aadhaar card) ಪ್ರಮುಖ ಗುರುತಿಸಿನ ಪುರಾವೆ ಆಗಿದೆ. ಅಲ್ಲದೇ ಇತ್ತೀಚಿಗೆ ಬಹುತೇಕ ಎಲ್ಲ ಸೇವೆಗಳು ಡಿಜಿಟಲ್ ವ್ಯವಸ್ಥೆಯನ್ನು ಹೊಂದಿದ್ದು, ಹೀಗಾಗಿ ಹಲವು ಕಡೆಗಳಲ್ಲಿ ಆಧಾರ್ ಲಿಂಕ್ ಮಾಡಬೇಕಿರುತ್ತದೆ. ಅದಾಗ್ಯೂ, ಆಧಾರ್ ಕಾರ್ಡ್ ಸುರಕ್ಷತೆಯ ಬಗ್ಗೆಯೂ ಕಾಳಜಿವಹಿಸುವುದು ಮುಖ್ಯವಾಗಿದೆ. ಏಕೆಂದರೆ ಆಧಾರ್ ಕಾರ್ಡ್ ದುರುಪಯೋಗ ಮಾಡಿಕೊಳ್ಳುವ ವಂಚಕರು ಇದ್ದಾರೆ. ನಿಮಗೆ ಗೊತ್ತಿಲ್ಲದೇ ನಿಮ್ಮ ಆಧಾರ್ ಕಾರ್ಡ್ ಅನ್ನು ಯಾರಾದರೂ ಎಲ್ಲಿಯಾದರೂ ಬಳಕೆ ಮಾಡಿದ್ದಾರೆಯೇ ಎಂದು ತಿಳಿಯಬಹುದು!
ಯೂನಿಕ್ 12 ಸಂಖ್ಯೆಗಳನ್ನು ಒಳಗೊಂಡಿರುವ ಆಧಾರ್ ಕಾರ್ಡ್ (Aadhaar card) ಸರ್ಕಾರದ ಸೇವೆಗಳನ್ನು ಪಡೆಯಲು ಅಗತ್ಯ ಆಗಿದೆ. ಇದಲ್ಲದೇ ಬ್ಯಾಂಕಿಂಗ್ ಸೇವೆಗಳಿಗೆ, ಟೆಲಿಕಾಂ ಸೇವೆ ಪಡೆಯಲು ಆಧಾರ್ ಸಂಖ್ಯೆ ಲಿಂಕ್ ಮಾಡಲಾಗುತ್ತದೆ. ಹೀಗೆ ಹಲವು ಕಡೆಗಳಲ್ಲಿ ನೀವು ನಿಮ್ಮ ಆಧಾರ್ ನಂಬರ್ ನೀಡಬೇಕಿರುತ್ತದೆ. ಒಂದು ವೇಳೆ ನಿಮಗೆ ತಿಳಿಯದೇ ಯಾರಾದರೂ ನಿಮ್ಮ ಆಧಾರ್ ಕಾರ್ಡ್ ಬಳಕೆ ಮಾಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಚೆಕ್ ಮಾಡಬಹುದು.
ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆ ಮಾಡಲಾಗಿದೆ ಎಂಬುದನ್ನು ನೀವು ಪರಿಶೀಲಿಸಬಹುದು. ಆಗ ಆಧಾರ್ ಕಾರ್ಡ್ ಯಾವೆಲ್ಲಾ ಸೇವೆಗಳಿಗೆ ಲಿಂಕ್ ಮಾಡಲಾಗಿದೆ ಎಂಬುದು ನಿಮಗೆ ತಿಳಿಯುತ್ತದೆ. ನಿಮಗೆ ಗೊತ್ತಿಲ್ಲದೇ ಯಾವುದಾದರೂ ಸೇವೆಗಳಿಗೆ ನಿಮ್ಮ ಆಧಾರ್ ಬಳಕೆ ಆಗಿದ್ದರೆ ಅದೂ ತಿಳಿಯುತ್ತದೆ. ಹಾಗಾದರೇ ನಿಮ್ಮ ಆಧಾರ್ ಕಾರ್ಡ್ (Aadhaar card) ಎಲ್ಲೆಲ್ಲಿ ಬಳಕೆ ಮಾಡಲಾಗಿದೆ ಎಂಬುದನ್ನು ತಿಳಿಯುವುದು ಹೇಗೆ ಎಂಬುದನ್ನು ಮುಂದೆ ಓದಿರಿ.
ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆ ಆಗಿದೆ ಹೀಗೆ ತಿಳಿಯಿರಿ
ಹಂತ 1: ಮೊದಲಿಗೆ myAadhaar ಪೋರ್ಟಲ್‌ಗೆ ಭೇಡಿ ನೀಡಿ.
ಹಂತ 2: ನಂತರ ನಿಮ್ಮ ಆಧಾರ್ ಸಂಖ್ಯೆ, ಅಲ್ಲಿನ ಕ್ಯಾಪ್ಚಾ ಕೋಡ್ ಅನ್ನು ಎಂಟ್ರಿ ಮಾಡಿರಿ.
ಹಂತ 3: ಆ ಬಳಿಕ OTP ಜೊತೆಗೆ ಲಾಗಿನ್ ಮಾಡಿ ಆಯ್ಕೆ ಕ್ಲಿಕ್ ಮಾಡಿ.
ಹಂತ 4: ತದ ನಂತರ ನಿಮ್ಮ ರಿಜಿಸ್ಟರ್ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಆಗ ನಿಮ್ಮ ಅಕೌಂಟ್ ತೆರೆಯಲು ಅದನ್ನು ನಮೂದಿಸಿ.
ಹಂತ 5: ಅಲ್ಲಿ Authentication History ಆಯ್ಕೆ ಅನ್ನು ಸೆಲೆಕ್ಟ್ ಮಾಡಿರಿ. ಹಾಗೆಯೇ ನೀವು ಚೆಕ್ ಮಾಡ ಬಯಸುವ ಅವಧಿಗೆ ದಿನಾಂಕ ಸೆಟ್ ಮಾಡುವ ಆಯ್ಕೆ ಮಾಡಿ.
ಹಂತ 6: ನಂತರ ಲಾಗ್ ಅನ್ನು ಚೆಕ್ ಮಾಡಿ. ಇದರಲ್ಲಿ ಯಾವುದೇ ಪರಿಚಯವಿಲ್ಲದ ಅಥವಾ ಅನುಮಾನಾಸ್ಪದ ಟ್ರಾನ್ಸಾಕ್ಶನ್ ಅನ್ನು ಚೆಕ್ ಮಾಡಿರಿ. ಒಂದು ವೇಳೆ ಅನಧಿಕೃತ ಟ್ರಾನ್ಸಾಕ್ಶನ್ ಪತ್ತೆಯಾದರೆ, ಕೂಡಲೇ ಆ ಬಗ್ಗೆ UIDAI ಗೆ ವರದಿ ಮಾಡಿರಿ.
UIDAIಗೆ ವರದಿ ಮಾಡಿ
ನಿಮ್ಮ ಅಧಾರ್ ಕಾರ್ಡ್ ಸಂಖ್ಯೆಯಲ್ಲಿ ಅನಧಿಕೃತ ಟ್ರಾನ್ಸಾಕ್ಶನ್ ಏನಾದರೂ ಪತ್ತೆ ಆದರೆ. ಆ ಬಗ್ಗೆ ನೀವು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಕೇಂದ್ರದ ಟೋಲ್ - ಫ್ರೀ ಸಹಾಯವಾಣಿಗೆ 1947 ಸಂಖ್ಯೆಗೆ ಕರೆ ಮಾಡಬಹುದು. ಅಥವಾ ಅನಧಿಕೃತ ಟ್ರಾನ್ಸಾಕ್ಶನ್ ಬಗ್ಗೆ ದೂರನ್ನು help@uidai.gov.in ಇ - ಮೇಲ್ ಸಹ ಕಳುಹಿಸಬಹುದು.
ಆಧಾರ್ ಕಾರ್ಡ್ ಬಯೋಮೆಟ್ರಿಕ್ ಲಾಕ್
ಅಧಾರ್ ಕಾರ್ಡ್ ಬಯೋಮೆಟ್ರಿಕ್ ದುರುಪಯೋಗ ತಡೆಯಲು ಬಳಕೆದಾರರು ತಮ್ಮ ಆಧಾರ್ ಕಾರ್ಡ್‌ಗೆ ಬಯೋಮೆಟ್ರಿಕ್ ಲಾಕ್ (Lock) ಸಹ ಮಾಡಬಹುದು. ಅಗತ್ಯ ಹಾಗೂ ಬೇಕಾದ ಸಂದರ್ಭಗಳಲ್ಲಿ ಮಾತ್ರ ಅನ್‌ಲಾಕ್ (Unlock) ಮಾಡುವ ಅವಕಾಶ ಸಹ ಇದೆ.