ಬದಿಯಡ್ಕ: ಅಂಬೇಡ್ಕರ್ ವಿಚಾರ ವೇದಿಕೆ ಬದಿಯಡ್ಕ ಇದರ ಆಶ್ರಯದಲ್ಲಿ ಇಂದು ಬೆಳಿಗ್ಗೆ 10 ರಿಂದ ಬದಿಯಡ್ಕ ಸಂಸ್ಕøತಿ ಭವನದಲ್ಲಿ ಕವಿ, ಕಥೆಗಾರ ಎರ್ಪಕಟ್ಟೆ ನೆನಪು ಕಾರ್ಯಕ್ರಮ ಆಯೋಜಿಸಲಾಗಿದೆ.
ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ನಾರಾಯಣ ದೇಲಂಪಾಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಂಶೋಧನಾ ವಿದ್ಯಾರ್ಥಿ ಸುಧೀಶ್ ಮಿಜಾರು ಎರ್ಪಕಟ್ಟೆಯವರ ಕಥಾ ಅವಲೋಕನ ನಡೆಸುವರು. ನಿವೃತ್ತ ಬ್ಯಾಂಕ್ ಪ್ರಬಂಧಕ ಐತ್ತ ಮಾನ್ಯ ಹಾಗೂ ಪತ್ರಿಕಾ ಸಂಪಾದಕ ರಮೇಶ್ ಮಂಜೇಶ್ವರ ಅವರು ಎರ್ಪಕಟ್ಟೆಯವರ ಒಡನಾಟದ ನೆನಪುಗಳನ್ನು ಹಂಚುವರು. ಈ ಸಂದರ್ಭ ಆಶ್ರಯ ಬೇಳ ಅವರಿಗೆ ಎರ್ಪಕಟ್ಟೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಶಾರದಾ ಎರ್ಪಕಟ್ಟೆ ಉಪಸ್ಥಿತರಿರುವರು. ಬಳಿಕ ಪುರುಷೋತ್ತಮ ಭಟ್ ಕೆ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಥಾಗೋಷ್ಠಿಯಲ್ಲಿ ಪದ್ಮಾವತಿ ಏದಾರ್, ಬಾಲಕೃಷ್ಣ ಏಳ್ಕಾನ, ಅಕ್ಷತಾ ಭಟ್ ಪುದುಕೋಳಿ, ದೀಕ್ಷಾ ಎಸ್.ಪಿ., ಗ್ರೀಷ್ಮಾ ಬಿ., ಮನ್ವಿತಾ ಕೆ. ಕಥಾ ವಾಚನ ಗೈಯ್ಯುವರು. ನಾರಾಯಣ ಬಾರಡ್ಕ, ರಾಮ ಪಟ್ಟಾಜೆ ಮೊದಲಾದವರು ಉಪಸ್ಥಿತರಿರುವರು.