ಕಾಸರಗೋಡು: ಪಡನ್ನಕ್ಕಾಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎಸ್ಸಾರ್ಟಿಸಿ ಬಸ್ ಹಾಗೂ ಕಾರು ಡಿಕ್ಕಿಯಾಗಿ ವಿದ್ಯಾರ್ಥಿಗಳಿಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಪಡನ್ನಕ್ಕಾಡ್ ತೀರ್ಥಂಕರ ನಿವಾಸಿ, ಜಪಾನ್‍ನಲ್ಲಿ ಉದ್ಯೋಗದಲ್ಲಿರುವ ಲತೀಫ್ ಕಲ್ಲಾಯಿ-ಫಾತಿಮತ್‍ಸುಹರಾಬಿ ದಂಪತಿ ಮಕ್ಕಳು ಹಾಗೂ ನೀಲೇಶ್ವರ ರಾಜಾಸ್ ಪ್ರೌಢಶಾಲಾ ವಿದ್ಯಾರ್ಥಿ ಲೈಹಾಕ್ ಸೈನಬಾ(12) ಮತ್ತು ನೀಲೇಶ್ವರ ಸರ್ಕಾರಿ ಎಲ್‍ಪಿ ಶಾಲಾ ವಿದ್ಯಾರ್ಥಿ ಸೆಯಿಲ್ ರುಮಾನ್(9)ಮೃತಪಟ್ಟವರು.
ಫಾತಿಮತ್ ಸುಹರಾಬಿ ಹಾಗೂ ಇವರ ಇತರ ಇಬ್ಬರು ಮಕ್ಕಳಾದ ಫಾಯಿಸ್(18) ಹಾಗೂ ಶರೀನ್ ಗಂಭೀರ ಗಾಐಗೊಂಡಿದ್ದು, ಇವರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಣ್ಣೂರಿನ ಮುನ್ನಂಪುರಂನಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಕಾರಿನಲ್ಲಿ ತೆರಳುತ್ತಿದ್ದಾಗ ಅಪಘಾತ ನಡೆದಿದೆ. ಅಪಘಾತದಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ನೀಲೇಶ್ವರ ಠಾಣೆ ಪೊಲಿಸರು ಕೇಸು ದಾಖಲಿಸಿಕೊಂಡಿದ್ದಾರೆ.