ಕುಂಬಳೆ: ಕುಂಬಳೆ ಸರ್ಕಾರಿ ಉನ್ನತ ಪ್ರೌಢಶಾಲೆಯಲ್ಲಿ 1990-91ನೇ ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ಸಮಾಗಮ-2024 ಇಂದು(ಡಿ. 21) ನಡೆಯಲಿದೆ. ಪ್ರಸಿದ್ದ ಲೇಖಕಿ ಎಂ.ಎ.ಮುಮ್ತಾಜ್ ಕಾರ್ಯಕ್ರಮ ಉದ್ಘಾಟಿಸುವರು.
ಬೆಳಗ್ಗೆ 11 ರಿಂದ ಹಳೆ ನೆನಪುಗಳನ್ನು ಮೆಲುಕು ಹಾಕುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಲೇಖಕ ಹಾಗೂ ಪತ್ರಕರ್ತ ಕೆ.ಎಂ. ಅಬ್ಬಾಸ್ ಉದ್ಘಾಟಿಸುವರು. ಸಂಜೆ 3.30ರಿಂದ ಕಲಾ ಭವನ್ ರಾಜು ಮತ್ತು ಸಂಗಡಿಗರಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ