ನೆಟ್‌ವರ್ಕ್ ಸಿಗ್ನಲ್ ಚೆಕ್ ಮಾಡಿ
ಮೊಬೈಲ್ ಇಂಟರ್ನೆಟ್ (Internet) ಸ್ಲೋ ಆದಾಗ, ಮೊದಲಿಗೆ ನೆಟ್‌ವರ್ಕ್ ಸಿಗ್ನಲ್ ಚೆಕ್ ಮಾಡಿ. ಕಡಿಮೆ ಸಿಗ್ನಲ್ ಇದ್ದರೆ, ಇಂಟರ್ನೆಟ್ ಸ್ಪೀಡ್ ಸಹ ಕಡಿಮೆ ಆಗಿರುತ್ತದೆ. ಅದಕ್ಕಾಗಿ ಫೋನಿನ ಸ್ಟೇಟಸ್ ಬಾರ್‌ನಲ್ಲಿ ಸಿಗ್ನಲ್ ಸರಿಯಾಗಿದೆಯೇ ಒಮ್ಮೆ ಚೆಕ್ ಮಾಡಿರಿ. ಒಂದು ವೇಳೆ ಸಿಗ್ನಲ್ ಕಡಿಮೆ ಇದ್ರೆ, ಬೇರೆ ಸ್ಥಳದಲ್ಲಿ ಮತ್ತೊಮ್ಮೆ ಪರಿಶೀಲಿಸಿ ನೋಡಿ.
ಹೆಚ್ಚಿನ Cache ಸಂಗ್ರಹವು ಇಂಟರ್ನೆಟ್ ಸ್ಪೀಡ್ ಅನ್ನು ನಿಧಾನಗೊಳಿಸಬಹುದು. ನಿಮ್ಮ ಫೋನಿನಲ್ಲಿ ನಿಯಮಿತವಾಗಿ ಅಪ್ಲಿಕೇಶನ್‌ಗಳು ಹಾಗೂ ವೆಬ್ ಬ್ರೌಸರ್ Cache ಕ್ಲಿಯರ್ ಮಾಡುವುದು ಉತ್ತಮ. ಇದಕ್ಕಾಗಿ ಬಳಕೆದಾರರು ಫೋನ್ ಸೆಟ್ಟಿಂಗ್‌ಗಳು > ಆಪ್ಸ್> ನಿರ್ದಿಷ್ಟ ಆಪ್ > ಸ್ಟೋರೇಜ್ > ಕ್ಲಿಯರ್ Cache ಆಯ್ಕೆ ಮಾಡಬಹುದು.
ಸಾಫ್ಟ್‌ವೇರ್ ಅಪ್‌ಡೇಟ್
ಮೊಬೈಲ್ಗಳು ಅಗತ್ಯ ವೇಳೆ ಸಾಫ್ಟ್‌ವೇರ್ ಅಪ್‌ಡೇಟ್ ಬೇಡುತ್ತವೆ. ಮೊಬೈಲ್ ಸಾಫ್ಟ್‌ವೇರ್ ಅಪ್‌ಡೇಟ್ ಕೇಳಿದಾಗ, ಇತ್ತೀಚಿನ ಓಎಸ್ ಆವೃತ್ತಿಗೆ ಅಪ್‌ಡೇಟ್ ಮಾಡಿಕೊಳ್ಳುವುದು ಉತ್ತಮ. ಸರಿಯಾಗಿ ಫೋನ್ ಅಪ್‌ಡೇಟ್ ಮಾಡಿಕೊಳ್ಳದಿದ್ದರೆ, ಅದು ಸಹ ಇಂಟರ್ನೆಟ್ ವೇಗಕ್ಕೆ ಹಿನ್ನಡೆ ಮಾಡುವ ಸಾಧ್ಯತೆಗಳು ಇರುತ್ತವೆ. ಹೀಗಾಗಿ ಇತ್ತೀಚಿನ ಆವೃತ್ತಿಗೆ ನಿಮ್ಮ ಮೊಬೈಲ್ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿಕೊಳ್ಳಿ.
ಸುರಕ್ಷಿತ ಹಾಗೂ ಸ್ಪೀಡ್ ವೆಬ್ ಬ್ರೌಸರ್ ಬಳಕೆ ಮಾಡಿ
ಇಂಟರ್ನೆಟ್ ಬಳಕೆ ಮಾಡಲು ಸುರಕ್ಷಿತ ಹಾಗೂ ಸ್ಪೀಡ್ ವೆಬ್ ಬ್ರೌಸರ್ ಆಯ್ಕೆ ಮಾಡಿಕೊಳ್ಳಿ. ಕೆಲವೊಮ್ಮೆ ನೀವು ಬಳಕೆ ಮಾಡುವ ವೆಬ್ ಬ್ರೌಸರ್ ಸಹ ನಿಮ್ಮ ಇಂಟರ್ನೆಟ್ ಸ್ಪೀಡ್ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಇರುತ್ತವೆ. ಹೀಗಾಗಿ ಉತ್ತಮ ವೆಬ್ ಬ್ರೌಸರ್ ಮಾಡಿಕೊಳ್ಳಬೇಕು. ಗೂಗಲ್ ಕ್ರೋಮ್ ಹಾಗೂ ಮೋಜಿಲ್ಲಾ ಫೈರ್‌ಫಾಕ್ಸ್ ಜನಪ್ರಿಯ ವೆಬ್ ಬ್ರೌಸರ್‌ಗಳ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿವೆ.
ಬ್ಯಾಕ್‌ಗ್ರೌಂಡ್ ಆಪ್ ನಿಷ್ಕ್ರೀಯಗೊಳಿಸಿ
ಕೆಲವೊಮ್ಮೆ ಮೊಬೈಲ್‌ನಲ್ಲಿ ಬ್ಯಾಕ್‌ಗ್ರೌಂಡ್ ಅಪ್ಲಿಕೇಶನ್‌ಗಳು ಕೆಲಸ ಮಾಡುತ್ತಿರುತ್ತವೆ. ಹೀಗೆ ಬ್ಯಾಕ್‌ಗ್ರೌಂಡ್‌ನಲ್ಲಿ ಹೆಚ್ಚಿನ ಆಪ್‌ಗಳು ಕಾರ್ಯ ಮಾಡುತ್ತಿದ್ದರೆ, ಅದು ಇಂಟರ್ನೆಟ್ ಸ್ಪೀಡ್ ಕಡಿಮೆ ಆಗಲು ಕಾರಣವಾಗಬಹುದು. ಹೀಗಾಗಿ ನಿಮ್ಮ ಫೋನಿನಲ್ಲಿ ಬ್ಯಾಕ್‌ಗ್ರೌಂಡ್ ಆಪ್ ನಿಷ್ಕ್ರೀಯಗೊಳಿಸಿ.
ಡೇಟಾ ಸೇವರ್ ಮೋಡ್ ಬಳಕೆ ಮಾಡಬಹುದು
ಇಂದಿನ ಬಹುತೇಕ ಮೊಬೈಲ್‌ಗಳು ಡೇಟಾ ಸೇವರ್ ಮೋಡ್ ಫೀಚರ್ ಅನ್ನು ಹೊಂದಿವೆ. ಡೇಟಾ ಸೇವರ್ ಮೋಡ್ ಆಪ್‌ಗಳಿಗೆ ಬ್ಯಾಕ್‌ಗ್ರೌಂಡ್ ಡೇಟಾ ಬಳಕೆಯನ್ನು ನಿರ್ಬಂಧಿಸುತ್ತದೆ. ಅಲ್ಲದೇ ಡೇಟಾ ಸೇವರ್ ಮೋಡ್ ಅನ್ನು ಆಕ್ಟಿವ್ ಮಾಡುವುದರಿಂದ ಡೇಟಾ ಬಳಕೆ ಕಡಿಮೆ ಮಾಡಲು ಇದು ನೆರವಾಗುತ್ತದೆ. ಹಾಗೆಯೇ ಇಂಟರ್ನೆಟ್ ವೇಗಕ್ಕೂ ಉತ್ತಮ.