ಆದ್ರೆ ಇಲ್ಲೊಬ್ಬ ವ್ಯಕ್ತಿ ನಾವು ಮೃತಪಟ್ಟ ಬಳಿಕ ಏನಾಗುತ್ತದೆ? ನಮಗೆ ಅನಂತರ ಏನೆಲ್ಲಾ ಸಂಭವಿಸಲಿದೆ ಎಂಬುದನ್ನು ವಿವರಿಸುತ್ತಾರೆ. ನಿಮಗೆ ದೊಡ್ಡ ವಿಜ್ಞಾನಿ ಐನ್‌ಸ್ಟೈನ್ ಗೊತ್ತಿರಬಹುದು. ಆತನ ಐಕ್ಯೂಗಿಂತ ಹೆಚ್ಚಾಗಿರುವ ಕ್ರಿಸ್ ಲ್ಯಾಂಗರ್ ಎಂಬಾತ ಈ ಕುರಿತಂತೆ ನುಡಿದಿರುವ ವಿಚಾರಗಳು ಈಗ ವೈರಲ್ ಆಗಿದೆ.
ಆಲ್ಬರ್ಟ್ ಐನ್‌ಸ್ಟೈನ್ ಮತ್ತು ಸ್ಟೀಫನ್ ಹಾಕಿಂಗ್‌ರನ್ನು ಮೀರಿಸುವ ಐಕ್ಯೂ ಹೊಂದಿದ್ದೇನೆ ಎಂದು ಹೇಳಿಕೊಂಡಿರುವ ಕ್ರಿಸ್ ಲ್ಯಾಂಗನ್ ನಾವು ಮೃತಪಟ್ಟ ಬಳಿಕ ಏನಾಗಲಿದೆ ಎಂಬ ಪ್ರಶ್ನೆ ಉತ್ತರ ನೀಡಿದ್ದಾನೆ. ತನ್ನ ಐಕ್ಯೂ 190 ಮತ್ತು 210 ರ ನಡುವೆ ಇದೆ ಎಂದು ಹೇಳಿಕೊಳ್ಳುವ ಕ್ರಿಸ್ ಲ್ಯಾಂಗನ್, ಪಾಡ್‌ಕ್ಯಾಸ್ಟ್‌ನಲ್ಲಿ ಒಬ್ಬ ವ್ಯಕ್ತಿ ಸತ್ತಾಗ ಏನಾಗುತ್ತದೆ ಎಂದು ವಿವರಿಸಿದರು. ಕರ್ಟ್ ಜೈಮುಂಗಲ್ ಅವರ ಆನ್ ದಿ ಥಿಯರೀಸ್ ಆಫ್ ಎವೆರಿಥಿಂಗ್ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡುವಾಗ ಸಾವಿನ ನಂತರ ಏನಾಗುತ್ತದೆ ಎಂಬುದನ್ನು ನೆನೆದು ಮಾನವರು ಭಯಪಡಬಾರದು, ಏಕೆಂದರೆ ದೇಹಕ್ಕೆ ಸಾವು ಅಂತ್ಯವಲ್ಲ ಎಂದು ಅವರು ನಂಬುತ್ತಾರಂತೆ.
ಕ್ರಿಸ್ ಲ್ಯಾಂಗನ್ ಯಾರು?:
ಕ್ರಿಸ್ ಲ್ಯಾಂಗನ್ ಅಮೆರಿಕದಲ್ಲಿ ಬಹುದೊಡ್ಡ ಹಸು ಸಾಕಾಣಿಕ ಕೇಂದ್ರ ಹೊಂದಿರುವ ವ್ಯಕ್ತಿ. ಆತ ಕಾಗ್ನಿಟಿವ್-ಥಿಯರೆಟಿಕ್ ಮಾಡೆಲ್ ಆಫ್ ದಿ ಯೂನಿವರ್ಸ್ (CTMU) ಚಿಂತನೆಯ ಮೂಲಕ ಯೂಟ್ಯೂಬ್ ಸೇರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರು. ಆತ ತನಗೆ ಐನ್‌ಸ್ಟೈನ್, ಸ್ಟೀಫನ್ ಹಾಕಿಂಗ್ಸ್ ಅವರಿಗಿಂತ ಹೆಚ್ಚು ಬುದ್ದಿ ಶಕ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾನೆ.
ಆತನ ಪ್ರಕಾರ ಭೂಮಿ ಮೇಲಿನ ಪ್ರತಿಯೊಂದು ವಿಚಾರಗಳು ಗಣಿತ ಸೂತ್ರಗಳ ಆಧಾರದ ಮೇಲೆ ನಡೆಯುತ್ತಿದೆ. ಗಣಿತವನ್ನು ಬಳಸಿಕೊಂಡು ದೇವರು, ಆತ್ಮ ಮತ್ತು ಮರಣಾನಂತರದ ಜೀವನದ ಅಸ್ತಿತ್ವವನ್ನು ಸಾಬೀತುಪಡಿಸಲು ಸಾಧ್ಯವಿದೆ ಎಂದು ಅವರು ವಿವರಿಸಿದ್ದಾರೆ.
ಹಾಗಾದರೆ ಸಾವಿನ ಬಳಿಕ ಏನಾಗುತ್ತದೆ?:
ನಾವು ಮರಣ ಹೊಂದಿದ ಬಳಿಕ ನಮ್ಮಲ್ಲಿ ಏನಾಗುತ್ತದೆ ಎಂಬುದನ್ನು ತಿಳಿಯಲು ಶತಮಾನಗಳ ಹಿಂದಿನಿಂದಲೂ ಚರ್ಚೆಗಳು, ವಾದಗಳು ನಡೆಯುತ್ತಲೇ ಇದೆ. ಸಾವಿನ ಬಳಿಕ ನಾವು ವರ್ತಮಾನದಿಂದ ಮತ್ತೊಂದು ಕಾಲದಕ್ಕೆ ಚಲಿಸುತ್ತೇವೆ ಎಂದು ಆತ ಹೇಳಿಕೊಂಡಿದ್ದಾನೆ. ಸಾವು ಎಂದರೆ ಅಸ್ತಿತ್ವವನ್ನು ಬಿಡುವುದಲ್ಲ ಬದಲಿಗೆ ದೇಹವನ್ನು ತ್ಯಜಿಸುವುದು ಎಂದು ಆತ ಹೇಳಿದ್ದಾನೆ. ಈ ಸಮಯದಲ್ಲಿ ನೀವು ಹೊಂದಿರುವ ನಿಮ್ಮ ನಿರ್ದಿಷ್ಟ ಭೌತಿಕ ದೇಹದೊಂದಿಗಿನ ನಿಮ್ಮ ಸಂಬಂಧದ ಮುಕ್ತಾಯವಾಗಲಿದೆ.
ಅಂದರೆ ನೀವು ಒಂದು ದೇಹ ತ್ಯಜಿಸುತ್ತೀರಿ. ವಾಸ್ತವವನ್ನು ಬಿಟ್ಟು ಮತ್ತೊಂದು ದೇಹ ಸೇರುತ್ತೀರಿ. ಇದು ಮತ್ತೆ ನೀವು ಅಸ್ತಿತ್ವದಲ್ಲಿರುವಂತೆ ಮಾಡಲಿದೆ ಎಂದು ಅವರು ವಾದಿಸಿದ್ದಾರೆ. ಅಂದರೆ ನಾವು ಮೃತಪಟ್ಟ ಬಳಿಕ ನಮ್ಮ ಅಸ್ತಿತ್ವ ಮರೆಯಾಗಬಹುದು ಆದರೆ ಮತ್ತೊಂದು ಕಡೆ ನಾವು ಹೊಸ ದೇಹ ಹುಡುಕಬೇಕಾಗುತ್ತದೆ ಎಂಬುದು ಅವರ ವಾದ.