ಪೆರ್ಲ: ನಾಲಂದ ಕಾಲೇಜು ವಿದ್ಯಾರ್ಥಿಗಳ ಎನ್ನೆಸ್ಸೆಸ್ ಶಿಬಿರದ ಅಂಗವಾಗಿ ಮಾನವ ಸಂಪನ್ಮೂಲ ಅಭಿವೃದ್ದಿ ಕಾರ್ಯಕ್ರಮ ನಡೆಯಿತು. ಕೇರಳ ರಾಜ್ಯ ಎನ್ನೆಸ್ಸೆಸ್ ಪ್ರಶಸ್ತಿ ಪುರಸ್ಕøತ, ಕಾಸರಗೋಡು ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಎ. ಶ್ರೀನಾಥ್ ಕಾಸರಗೋಡು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ "ಎನ್ನೆಸ್ಸೆಸ್ ಕಾರ್ಯಚರಣೆ" ಎಂಬ ವಿಷಯದ ಕುರಿತು ತರಗತಿ ನೀಡಿದರು.
ಗ್ರಾಪಂ ಸದಸ್ಯೆ ರೂಪವಾಣಿ ಆರ್.ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಎನ್ನೆಸ್ಸೆಸ್ ಯೋಜನಾಧಿಕಾರಿ ವರ್ಷಿತ್ ಕೆ. ಕಾರ್ಯಕ್ರಮ ಸಂಯೋಜಿಸಿದರು. ಮ್ಯಾನೇಜ್ಮೆಂಟ್ ವಿಭಾಗದ ಮುಖ್ಯಸ್ಥೆ ನಿಶ್ಮಿತಾ, ಹಿಂದಿ ಉಪನ್ಯಾಸಕಿ ಚಂದ್ರಿಕಾ ಉಪಸ್ಥಿತರಿದ್ದರು.