ನವದೆಹಲಿ: ರೈಲ್ವೆಯ ಖಾಸಗೀಕರಣಕ್ಕೆ ಅವಕಾಶ ನೀಡಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದ ಬಳಿಕ ಲೋಕಸಭೆಯು ರೈಲ್ವೆ ಕಾನೂನುಗಳ ತಿದ್ದುಪಡಿ ಮಸೂದೆಗೆ ಬುಧವಾರ ಅಂಗೀಕಾರ ನೀಡಿತು.
ರೈಲ್ವೆ ತಿದ್ದುಪಡಿ ಮಸೂದೆ ಮೇಲಿನ ಚರ್ಚೆಗೆ ಪ್ರತಿಕ್ರಿಯಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ತಿದ್ದುಪಡಿಯಿಂದ ರೈಲ್ವೆಯನ್ನು ಖಾಸಗೀಕರಿಸಲಾಗುತ್ತದೆ ಎಂಬುದು ನಕಲಿ ನಿರೂಪಣೆಯಾಗಿದೆ ಎಂದು ಹೇಳಿದರು.
ಸಂವಿಧಾನದ ಬಗ್ಗೆ ವಿರೋಧ ಪಕ್ಷದವರ ನಕಲಿ ನಿರೂಪಣೆಯು ವಿಫಲವಾಗಿದೆ. ಈಗ ಇದು ಸಹ ವಿಫಲವಾಗಲಿದೆ ಎಂದು ಅವರು ತಿಳಿಸಿದರು.
ರೈಲ್ವೆ (ತಿದ್ದುಪಡಿ) ಮಸೂದೆ- 2024, ರೈಲ್ವೆ ಮಂಡಳಿಯ ಕಾರ್ಯ ನಿರ್ವಹಣೆ ಮತ್ತು ಸ್ವಾತಂತ್ರ್ಯವನ್ನು ಹೆಚ್ಚಿಸುತ್ತದೆ. ಈ ಮಸೂದೆಯನ್ನು ಕಳೆದ ಅಧಿವೇಶನದಲ್ಲಿ ಮಂಡಿಸಲಾಗಿತ್ತು. ಅದು ಧ್ವನಿ ಮತದ ಮೂಲಕ ಬುಧವಾರ ಅಂಗೀಕಾರವಾಯಿತು.