ಬೀಜಿಂಗ್: ಪೂರ್ವ ಲಡಾಖ್‌ನಲ್ಲಿ ಮೂಡಿದ್ದ ಅನಿಶ್ಚಿತತೆ ಬಗೆಹರಿಸಿ ಸಹಜ ಸ್ಥಿತಿ ಮೂಡಿಸಲು ಇನ್ನಷ್ಟು ಪೂರಕ ಕ್ರಮಕೈಗೊಳ್ಳಲು ಭಾರತ ಮತ್ತು ಚೀನಾ ನಿರ್ಧರಿಸಿವೆ.ಉಭಯ ದೇಶಗಳ ವಿದೇಶಾಂಗ ಸಚಿವಾಲಯಗಳ ಮಟ್ಟದ 32ನೇ ಸಭೆಯ ಬಳಿಕ ಚೀನಾದ ವಿದೇಶಾಂಗ ಸಚಿವಾಲಯವು ಈ ಕುರಿತಂತೆ ಹೇಳಿಕೆ ನೀಡಿದೆ.
ಭಾರತ ಚೀನಾ ಗಡಿ ವ್ಯವಹಾರ ಸಹಕಾರ ಮತ್ತು ಸಂವಹನ ವೇದಿಕೆಯ (ಡಬ್ಲ್ಯುಎಂಸಿಸಿ) ಸಭೆಯ ನವದೆಹಲಿಯಲ್ಲಿ ನಡೆಯಿತು.
ರಾಜತಾಂತ್ರಿಕ ಮತ್ತು ಸೇನಾ ಹಂತದ ಚರ್ಚೆ ಮುಂದುವರಿಸಲು ಮತ್ತು ಸುಸ್ಥಿರ ಶಾಂತಿ, ಸ್ಥಿರತೆಯನ್ನು ಗಡಿ ಭಾಗದಲ್ಲಿ ಕಾಯ್ದುಕೊಳ್ಳಲು ಉಭಯ ದೇಶಗಳು ನಿರ್ಧರಿಸಿದವು ಎಂದು ಚೀನಾ ತಿಳಿಸಿದೆ.
ಪರಿಸ್ಥಿತಿಯನ್ನು ಉಭಯ ದೇಶಗಳು ಸಕಾರಾತ್ಮಕವಾಗಿ ವಿಶ್ಲೇಷಿಸಿದವು. ಪರಿಹಾರ ಕ್ರಮಗಳನ್ನು ಪರಿಣಾಮಕಾರಿ ಮತ್ತು ಸಮಗ್ರವಾಗಿ ಜಾರಿಗೊಳಿಸಲು ಸಮ್ಮತಿಸಿದವು. ಗಡಿ ವಿಷಯಕ್ಕೆ ವಿಶೇಷ ಪ್ರಾಮುಖ್ಯತೆ ನೀಡಿ ಚರ್ಚೆ ಮುಂದುವರಿಸಲು ತೀರ್ಮಾನಿಸಲಾಯಿತು ಎಂದು ವಿವರಿಸಿದೆ.
ಪೂರ್ವ ಲಡಾಖ್‌ನಲ್ಲಿ ಸಹಜ ಪರಿಸ್ಥಿತಿ ಸ್ಥಾಪಿಸವು ಕ್ರಮವಾಗಿ ಉಭಯ ದೇಶಗಳ ಸೇನೆಯ ವಾಪಸಾತಿ ಕುರಿತು ಅಕ್ಟೋಬರ್ 21ರಂದು ಒಪ್ಪಂದ ಮಾಡಿಕೊಂಡ ನಂತರ ನಡೆದ ಮೊದಲ ಸಭೆ ಇದಾಗಿದೆ.