ತಿರುವನಂತಪುರಂ: ಅಕ್ರಮವಾಗಿ ಅಳವಡಿಸಿರುವ ಫ್ಲಕ್ಸ್ ಬೋರ್ಡ್‍ಗಳು, ಧ್ವಜ ಕಂಬಗಳು, ಬ್ಯಾನರ್ ಗಳನ್ನು ತೆಗೆಯಲು ಸ್ಥಳೀಯಾಡಳಿತ ಸಂಸ್ಥೆಗಳು ಧಾವಂತದಲ್ಲಿವೆ.
ಈ ಸಂಬಂಧ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 10 ದಿನದೊಳಗೆ ಅದÀನ್ನು ತೆರವುಗೊಳಿಸುವಂತೆ ಸ್ಥಳೀಯಾಡಳಿತ ಕಾರ್ಯದರ್ಶಿಗಳಿಗೆ ಸರ್ಕಾರ ಸೂಚನೆ ನೀಡಿದೆ. ನ್ಯಾಯಾಲಯ ನಿಗದಿಪಡಿಸಿದ ಕಾಲಮಿತಿಯೊಳಗೆ ಪಂಚಾಯಿತಿ ಕಾರ್ಯದರ್ಶಿಗಳು ವಿಲೇವಾರಿಗೊಳಿಸಲು ಕ್ರಮ ಕೈಗೊಳ್ಳದಿದ್ದರೆ ದಂಡ ತೆರಬೇಕಾಗುತ್ತದೆ ಎಂದೂ ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ. ಬೋರ್ಡ್ ಗಳನ್ನು ತೆಗೆಯುವುದು ಮಾತ್ರವಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗದಂತೆ, ಸಂಘರ್ಷಗಳಾಗದ ರೀತಿ ವೈಜ್ಞಾನಿಕವಾಗಿ ನಡೆಸಬೇಕು ಎಂದು ಸೂಚಿಸಲಾಗಿದೆ.