ಕಾಸರಗೋಡು: ಕೇರಳ ಮೋಟಾರು ಕಾರ್ಮಿಕರ ಕಲ್ಯಾಣ ನಿಧಿಯ ಸದಸ್ಯರಾಗಿರುವ ಕಾರ್ಮಿಕರ ಮಕ್ಕಳಿಗೆ 2024-25 ನೇ ಶೈಕ್ಷಣಿಕ ವರ್ಷದ ಶಿಕ್ಷಣ ಸ್ಕಾಲರ್‍ಶಿಪ್‍ಗಾಗಿ 8 ನೇ ತರಗತಿಯಿಂದ ವೃತ್ತಿಪರ ಕೋರ್ಸ್‍ಗಳವರೆಗೆ ಓದುತ್ತಿರುವ ಮಕ್ಕಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಫಾರ್ಮನ್ನು ಕೇರಳ ಮೋಟಾರು ಕಾರ್ಮಿಕ ಕಲ್ಯಾಣ ನಿಧಿ ಕಾರ್ಯನಿರ್ವಾಹಕ ಕಚೇರಿಯಿಂದ ಅಥವಾ ಅಧಿಕೃತ ವೆಬ್‍ಸೈಟ್ ನಿಂದ ಪಡೆಯಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಕ್ಯೆ(04672205380)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.