ಶಬರಿಮಲೆ: ಸನ್ನಿಧಾನ ಬಳಿಯ ಕೊಬ್ಬರಿ ಶೆಡ್‍ನಿಂದ ಹೊಗೆ ಎದ್ದಿದ್ದು ಆತಂಕ ಮೂಡಿಸಿದೆ. ಕೆಲವೇ ನಿಮಿಷಗಳಲ್ಲಿ ಅಗ್ನಿಶಾಮಕ ದಳ ಆಗಮಿಸಿ ಹೊಗೆಯನ್ನು ನಂದಿಸಿತು.
ಶನಿವಾರ ಸಂಜೆ ಐದು ಗಂಟೆ ಸುಮಾರಿಗೆ ಕೊಬ್ಬರಿ ಶೆಡ್‍ನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳದವರು ಮೊದಲು ನೀರು ಸಿಂಪಡಿಸಿ ನಂತರ ನೊರೆ ಬಳಸಿ ಹೊಗೆಯನ್ನು ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಎಡಿಎಂ ಅರುಣ್ ಎಸ್ ನಾಯರ್, ಪೋಲೀಸ್ ವಿಶೇಷಾಧಿಕಾರಿ ಬಿ ಕೃಷ್ಣಕುಮಾರ್ ಭೇಟಿ ನೀಡಿದ್ದಾರೆ.
ಎರಡು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರಿಂದ ಕೊಬ್ಬರಿ ಗುತ್ತಿಗೆದಾರರು ಶೆಡ್ ನೊಳಗೆ ಹೆಚ್ಚುವರಿಯಾಗಿ ಕೊಬ್ಬರಿ ಸಂಗ್ರಹಿಸಿದ್ದರು. ಇದರಿಂದ ಹೊಗೆ ಎದ್ದಿದೆ. ಘಟನೆಯ ನಂತರ ಎಡಿಎಂ ಗುತ್ತಿಗೆದಾರರಿಗೆ ಕೊಬ್ಬರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸದಂತೆ ಸೂಚನೆ ನೀಡಿದ್ದಾರೆ.