ಮುಳ್ಳೇರಿಯ: ಮುಳಿಯಾರ್ ಪಂಚಾಯತ್ ವ್ಯಾಪ್ತಿಯ ವಿವಿಧೆಡೆ ಹುಲಿಗಳ ಹಾವಳಿ ಮುಂದುವರಿದಿದೆ. ಭಾನುವಾರ ರಾತ್ರಿ ಮುಳಿಯಾರ್ ಪಂಚಾಯಿತಿ ಕೇಂದ್ರವಾದ ಬೋವಿಕ್ಕಾನ ಪೇಟೆಗೆ ಹುಲಿ ಇಳಿದಿದೆ. ಬೋವಿಕ್ಕಾನ ಪೇಟೆಯ ದಿ. ಬಿ.ಕೆ.ಮುಹಮ್ಮದ್ ಕುಂಞಿ ಅವರ ಮನೆ ಬಳಿ ನಿನ್ನೆ ರಾತ್ರಿ 10:30ರ ಸುಮಾರಿಗೆ ಹುಲಿ ಕಾಣಿಸಿಕೊಂಡಿದೆ. ಮಾಹಿತಿ ತಿಳಿದ ಆರ್ ಆರ್ ಟಿ ತಂಡ ಹಾಗೂ ಸ್ಥಳೀಯರು ಸ್ಥಳದಲ್ಲಿ ಹುಡುಕಾಟ ನಡೆಸಿದರು. ಹುಲಿ ಕಂಡುಬಾರದ ಹಿನ್ನೆಲೆಯಲ್ಲಿ ಎಚ್ಚರ ವಹಿಸುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ. ಮುಳಿಯಾರು ಪಂಚಾಯತಿನ ವಿವಿದ ಕಡೆಗಳಲ್ಲಿ ಕಂಡು ಬಂದ ಹುಲಿಯನ್ನು ಬಲೆಗೆ ಕೆಡವಲು ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಿದ ಪ್ರಯತ್ನ ವಿಫಲವಾಗಿದೆ. ಈ ನಡುವೆ ಭಾನುವಾರ ರಾತ್ರಿ ಬೋವಿಕ್ಕಾನದಲ್ಲಿ ಹುಲಿ ಕಂಡು ಬಂದಿರುವುದು ಜನರಲ್ಲಿ ತೀವ್ರ ಭೀತಿ ಉಂಟಾಗಿದೆ.