HEALTH TIPS

ಉಮಾ ಥಾಮಸ್ ಅವಘಡ ಘಟನೆ, ನೃತ್ಯ ಕಾರ್ಯಕ್ರಮ ಆಯೋಜಕ ಮೃದಂಗ ವಿಷನ್ ಸಿಇಒ ಶಮೀರ್ ಅಬ್ದುಲ್ ರಹೀಮ್ ಬಂಧನ

ಕೊಚ್ಚಿ: ಕಾಲೂರು ಕ್ರೀಡಾಂಗಣದ ವಿಐಪಿ ಗ್ಯಾಲರಿಯಿಂದ ಬಿದ್ದು ಶಾಸಕಿ ಉಮಾ ಥಾಮಸ್ ಗಂಭೀರವಾಗಿ ಗಾಯಗೊಂಡಿರುವುದು ಭಾರೀ ಚರ್ಚೆ ಹುಟ್ಟುಹಾಕಿದೆ. 

ಗಿನ್ನಿಸ್ ದಾಖಲೆಗಾಗಿ ಆಯೋಜಿಸಿದ್ದ 12000 ಮಂದಿ ಭಾಗವಹಿಸಿದ್ದ ನೃತ್ಯ ಕಾರ್ಯಕ್ರಮದ ಸಂಘಟಕರಾದ ಮೃದಂಗ ವಿಷನ್ ಸಿಇಒ ಅವರನ್ನು ಪೋಲೀಸರು ಘಟನೆ ಸಂಬಂಧ ಕರೆದೊಯ್ದರು.

ಸಿಇಒ ಶಮೀರ್ ಅಬ್ದುಲ್ ರಹೀಮ್ ಅವರನ್ನು ಬಂಧಿಸಲಾಗಿದೆ. ಅವರು ಕೊಚ್ಚಿಯ ಹೋಟೆಲ್‍ನಲ್ಲಿ ಅಡಗಿಕೊಂಡಿದ್ದರು. ಮೃದಂಗವಿಷನ್ ಸಿಇಒ ಮತ್ತು ಎಂಡಿ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ಇಂದು ಪರಿಗಣಿಸಲಿರುವ ಸಂದರ್ಭದಲ್ಲಿ ಸಿಇಒ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

ಈವೆಂಟ್ ಮ್ಯಾನೇಜ್‍ಮೆಂಟ್ ಅನ್ನು ನಿರ್ವಹಿಸಿದ ಆಸ್ಕರ್ ಇವೆಂಟ್ಸ್‍ನ ಮ್ಯಾನೇಜರ್‍ನನ್ನು ಮೊದಲು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ಕೊಚ್ಚಿಯಲ್ಲಿ ಹನ್ನೆರಡು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ನೃತ್ಯ ಕಾರ್ಯಕ್ರಮದ ಆಯೋಜನೆಯಲ್ಲಿ ಗಂಭೀರ ವೈಫಲ್ಯ ಹಾಗೂ ಅವ್ಯವಹಾರ ನಡೆದಿದೆ. ಸಚಿವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಅನುಸರಿಸಿಲ್ಲ. ಅಗ್ನಿಶಾಮಕ ದಳದ ಪ್ರಾಥಮಿಕ ತಪಾಸಣೆಯಲ್ಲಿ ಸಂಘಟಕರು ಗಂಭೀರ ವೈಫಲ್ಯ ಎಸಗಿದ್ದಾರೆ. ನೃತ್ಯ ಕಾರ್ಯಕ್ರಮಕ್ಕೆ ಬಂದವರಿಂದ ಸಂಘಟಕರಾದ ಮೃದಂಗವಿಷನ್ ಮೂರು ಕೋಟಿ ರೂ.ಗೂ ಹೆಚ್ಚು ಹಣ ವಸೂಲಿ ಮಾಡಿದ್ದು, ಮೂಲ ಸೌಕರ್ಯ ಕೂಡ ಕಲ್ಪಿಸಿಲ್ಲ ಎಂಬ ದೂರು ಇದೆ.

ಮೃದಂಗವಿಷನ್ ಗಿನ್ನಿಸ್ ದಾಖಲೆ ಮಾಡುವ ಉದ್ದೇಶದಿಂದ ಹನ್ನೆರಡು ಸಾವಿರ ನೃತ್ಯಗಾರರ ಭರತನಾಟ್ಯವನ್ನು ಆಯೋಜಿಸಿತ್ತು. ತಮಿಳುನಾಡಿನ ದಾಖಲೆಯನ್ನು ಸೋಲಿಸಲು ಕೇರಳದ ನೃತ್ಯ ಕಾರ್ಯಕ್ರಮ ಎಂದು ಅಭಿಯಾನವನ್ನು ಕರೆಯಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಲು ಒಬ್ಬರಿಂದ ಮೂರು ಸಾವಿರದ ಐನೂರು ರೂ.ಟಿಕೆಟ್ ಪಡೆಯಲಾಗಿತ್ತು.

ಮೇಕಪ್ ಸೇರಿದಂತೆ ಎಲ್ಲಾ ವೆಚ್ಚಗಳನ್ನು ಈವೆಂಟ್‍ನಲ್ಲಿ ಭಾಗವಹಿಸುವವರು ಭರಿಸಬೇಕಾಗುತ್ತದೆ. ಅವರೊಂದಿಗೆ ಬರುವವರು ಕಾರ್ಯಕ್ರಮ ವೀಕ್ಷಿಸಲು ಮತ್ತೊಂದು ಟಿಕೆಟ್ ಖರೀದಿಸಬೇಕು. ನಟಿ ಹಾಗೂ ನರ್ತಕಿ ದಿವ್ಯಾ ಉಣ್ಣಿ ಕಾರ್ಯಕ್ರಮಕ್ಕೆ ಬಂದಾಗ ಅವರ ಹೆಸರಲ್ಲಿ ಜಾಹೀರಾತಿಗೆ ಕೂಡ ಭಾರೀ ಮೊತ್ತ ಸಂಗ್ರಹಿಸಲಾಗಿದೆ ಎಂದು ಆರೋಪಿಸಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries