ಲಖನೌ: ಇಸ್ಕಾನ್ ಅನ್ನು ಮೂಲಭೂತವಾದಿ ಸಂಘಟನೆ ಎಂದು ಕರೆದು, ಭಾರತೀಯ ಮಹಿಳೆಯರ ಕುರಿತಂತೆ ಆಕ್ಷೇಪಾರ್ಹ ಪದಗಳನ್ನು ಬಳಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಬಾಂಗ್ಲಾದೇಶದ ಇಬ್ಬರು ವಿದ್ಯಾರ್ಥಿಗಳನ್ನು ಆಲಿಗಢ ಮುಸ್ಲಿಂ ವಿದ್ಯಾಲಯ (ಎಂಎಂಯು)ದಿಂದ ಡಿಬಾರ್ ಮಾಡಲಾಗಿದೆ. ಮತ್ತೊಬ್ಬ ವಿದ್ಯಾರ್ಥಿಗೆ ಎಚ್ಚರಿಕೆಯ ನೋಟಿಸ್ ನೀಡಲಾಗಿದೆ.
'ಎಲ್‌ಎಲ್‌ಬಿಗೆ ಪ್ರವೇಶಾತಿ ಪಡೆದಿದ್ದ ಮೆಹಮ್ಮೂದ್ ಹಸನ್, ಸಮಿುಲ್ ಇಸ್ಲಾಂ ಅವರನ್ನು ಡಿಬಾರ್ ಮಾಡಲಾಗಿದೆ. ಇಬ್ಬರು ಸದ್ಯ ಬಾಂಗ್ಲಾದೇಶದಲ್ಲಿದ್ದಾರೆ. ಬಿಎ (ಅರ್ಥಶಾಸ್ತ್ರ) ಪದವಿ ಪಡೆಯುತ್ತಿರುವ ಮೊಹಮ್ಮದ್ ಆರೀಫ್-ಉರ್-ರೆಹಮಾನ್ ಅವರಿಗೆ ಎಚ್ಚರಿಕೆ ಪತ್ರ ನೀಡಿದ್ದು, ಈಗಿನ ವಿದ್ಯಾಭ್ಯಾಸ ಮುಗಿದ ಬಳಿಕ ಕಾಲೇಜಿನಲ್ಲಿ ಮತ್ತೆ ಶಿಕ್ಷಣ ಬಳಿಕ ಅವರಿಗೆ ಅವಕಾಶ ನೀಡುವುದಿಲ್ಲ' ಎಂದು ವಿವಿಯ ಅಧಿಕಾರಿಗಳು ತಿಳಿಸಿದ್ದಾರೆ.
ಆಕ್ಷೇಪಾರ್ಹ ಸಂದೇಶ ಪ‍್ರಕಟಿಸಿದ ಕುರಿತಂತೆ ವಿ.ವಿಯ ಕೆಲವು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ ಬಳಿಕ ಈ ಕ್ರಮ ಕೈಗೊಂಡಿದೆ.