ಪೆರ್ಲ: ಮಾತೃಸ್ವರೂಪಿಯಾದ ಗೋಮಾತೆಯ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಗೋವಿನ ಆರೋಗ್ಯವನ್ನು ಕಾಪಾಡಿಕೊಂಡು ಗೋವಂಶವನ್ನು ಉಳಿಸುವ ಮಹತ್ತರವಾದ ಜವಾಬ್ದಾರಿ ನಮ್ಮ ಪಾಲಿಗಿದೆ. ವೇದಕಾಲದಲ್ಲಿಯೇ ಗೋವಿಗೆ ಮಹತ್ವವಾದ ಸ್ಥಾನವನ್ನು ಹಿರಿಯರು ನೀಡಿದ್ದಾರೆ. ಮನುಷ್ಯ ಜೀವನದ ಉತ್ತಮ ಆರೋಗ್ಯಕ್ಕೆ ಗೋವು ಪ್ರಧಾನ ಕಾರಣ ಎಂದು ದಿನೇಶ್ ಶಹರಾ ಪೌಂಡೇಶನ್ ಮುಖ್ಯಸ್ಥ ದಿನೇಶ್ ಶಹರಾ ತಿಳಿಸಿದರು.
ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ಗುರುವಾರ ಶ್ರೀರಾಮಚಂದ್ರಾಪುರ ಮಠದ ಕಾಮದುಘಾ ಯೋಜನೆಯೊಂದಿಗೆ ಸಹಕರಿಸುತ್ತಿರುವ ದಿನೇಶ್ ಶಹರಾ ಪೌಂಡೇಶನ್ ನೇತೃತ್ವದಲ್ಲಿ ಜರಗಿದ ಗೋಶಕ್ತಿ ಅಭಿಯಾನದಲ್ಲಿ ಕೃಷಿಕರೊಂದಿಗೆ ಸಂವಾದವನ್ನು ನಡೆಸಿ ಅವರು ಮಾತನಾಡಿದರು.
ಕಾಮದುಘಾ ಟ್ರಸ್ಟ್‍ನ ಅಧ್ಯಕ್ಷ ಡಾ. ವೈ.ವಿ ಕೃಷ್ಣಮೂರ್ತಿ ಬದಿಯಡ್ಕ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಮೃತಧಾರಾ ಗೋಶಾಲೆಯ ಅಧ್ಯಕ್ಷ ಜಗದೀಶ ಗೋಳಿತ್ತಡ್ಕ, ದೇಶೀಯ ತಳಿಯ ಗೋವನ್ನು ಸಾಕುತ್ತಿರುವ ಕೃಷಿಕರಾದ ಸುಬ್ರಹ್ಮಣ್ಯ ಪ್ರಸಾದ ನೆಕ್ಕರೆಕಳೆಯ, ನಾರಾಯಣ ಭಟ್ ದಂಬೆಮೂಲೆ, ನಿರಂಜನ ದೇವಲೋಕ, ವಿನಯಕೃಷ್ಣ, ಕೇಶವಪ್ರಸಾದ ಕೂಟೇಲು ಮೊದಲಾದವರು ಸಂವಾದದಲ್ಲಿ ಭಾಗವಹಿಸಿದ್ದರು.
ದಿನೇಶ್ ಶಹರಾ ಫೌಂಡೇಶನ್‍ನ ಪ್ರಮುಖರಾದ ಮೀರಾಜಿ, ಸಂಗೀತವನ್ನು ಚಿಕಿತ್ಸಾ ರೂಪದಲ್ಲಿ ಪ್ರಚಾರಗೊಳಿಸುತ್ತಿರುವ ಅನುಭೂತಿ ಗೋಸ್ವಾಮಿ ಜೊತೆಗಿದ್ದರು. ಗೋವುಗಳಿಗೆ ಪಾರಂಪರಿಕೆ ಚಿಕಿತ್ಸೆಯನ್ನೂ ನೀಡಲಾಯಿತು. ಶಾಹ್ರರವರು ಗೋಶಾಲೆಯ ಆವರಣದಲ್ಲಿ ಹಲಸಿನ ಗಿಡ ನೆಟ್ಟರು.