ನವದೆಹಲಿ: 'ಸಿರಿಯಾದಲ್ಲಿ ಸ್ಥಿರತೆ ಸ್ಥಾಪಿಸುವ ನಿಟ್ಟಿನಲ್ಲಿ ಶಾಂತಿ ಹಾಗೂ ಎಲ್ಲರನ್ನೂ ಒಳಗೊಳ್ಳುವ ರಾಜಕೀಯ ಪ್ರಕ್ರಿಯೆ ನಡೆಯಬೇಕು' ಎಂದು ಭಾರತೀಯ ವಿದೇಶಾಂಗ ಇಲಾಖೆಯು ಪ್ರತಿಪಾದಿಸಿದೆ. ಇಸ್ಲಾಮಿಕ್ ಹೋರಾಟಗಾರರು ಸಿರಿಯಾದಲ್ಲಿ ಪಾರುಪತ್ಯ ಸಾಧಿಸಿದ ಮರುದಿನವೇ, ಈ ಹೇಳಿಕೆ ನೀಡಿದೆ.
ಸಿರಿಯಾದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತಂತೆ ವಿದೇಶಾಂಗ ಸಚಿವಾಲಯವು ಮೇಲ್ವಿಚಾರಣೆ ನಡೆಸುತ್ತಿದೆ.
'ಸಿರಿಯಾದ ಪ್ರಾದೇಶಿಕ ಸಮಗ್ರತೆ, ಏಕತೆ ಹಾಗೂ ಸಾರ್ವಭೌಮತೆ ಕಾಪಾಡುವ ನಿಟ್ಟಿನಲ್ಲಿ ಎಲ್ಲ ಪಕ್ಷಗಳು ಜತೆಗೂಡಿ ಕೆಲಸ ಮಾಡಬೇಕು. ದೇಶದ ಎಲ್ಲ ಸಮಾಜದ ಹಿತ ಕಾಯಲು ಶಾಂತಿ ಹಾಗೂ ಎಲ್ಲರನ್ನೂ ಒಳಗೊಳ್ಳುವ ರಾಜಕೀಯ ಪ್ರಕ್ರಿಯೆ ನಡೆಯಬೇಕು' ಎಂದು ವಿದೇಶಾಂಗ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಸಿರಿಯಾದಲ್ಲಿರುವ ಭಾರತೀಯ ಸುರಕ್ಷತೆ ಹಾಗೂ ಭದ್ರತೆಗೆ ಸಂಬಂಧಿಸಿದಂತೆ ಡಮಾಸ್ಕಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ನಿರಂತರ ಸಂಪರ್ಕದಲ್ಲಿದೆ ಎಂದು ತಿಳಿಸಿದೆ.