ಕಾಸರಗೋಡು: ಆದೂರು ಪೊಲೀಸ್ ಠಾಣೆಯಲ್ಲಿ ತುಂಬಿತುಳುಕುವ ನದಿಯಲ್ಲಿ ಸ್ನಾನಕ್ಕೆ ಇಳಿದ ಮೂವರು ಮಕ್ಕಳು ನಾಪತ್ತೆಯಾಗಿದ್ದಾರೆ. ಅವರಲ್ಲಿ ಒಬ್ಬನನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತನ ಪ್ರಾಣ ಉಳಿಸಲಾಗಲಿಲ್ಲ.
ಕುತ್ತಿಕೋಲ್ ನಿಂದ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಎರಿಣ್ಣಿಪುಳದ ಸಿದ್ದಿಕಿ ಎಂಬವರ ಪುತ್ರ ರಿಯಾಜ್ (17) ಮೃತರು. ಮೃತದೇಹ ಚೆರ್ಕಳ ಕೆಕೆ ಪುರದ ಖಾಸಗಿ ಆಸ್ಪತ್ರೆಯಲ್ಲಿರಿಸಲಾಗಿದೆ. ಅಶ್ರಫ್ ಅವರ ಪುತ್ರ ಯಾಸಿನ್ (13) ಮತ್ತು ಮಜೀದ್ ಅವರ ಪುತ್ರ ಸಮದ್ (13) ಅವರಿಗಾಗಿ ಹುಡುಕಾಟ ಮುಂದುವರಿದಿದೆ. ಶುಕ್ರವಾರ ಮಧ್ಯಾಹ್ನ ಅವಘಡ ಸಂಭವಿಸಿದೆ. ಸಂಬಂಧಿಕರಾದ ಮೂವರು ಮಕ್ಕಳು ನದಿಗೆ ಸ್ನಾನಕ್ಕೆ ಇಳಿದಾಗ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.