ಪೆರ್ಲ: ಕಜಂಪಾಡಿ ಜಿ.ಡಬ್ಲ್ಯೂ.ಎಲ್.ಪಿ.ಶಾಲೆಯಲ್ಲಿ ಏಳು ದಿನಗಳ ಕಾಲ ನಡೆಯಲಿರುವ ಪೆರ್ಲ ನಾಲಂದ ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳ ಶಿಬಿರವನ್ನು ಶನಿವಾರ ಉದ್ಘಾಟಿಸಲಾಯಿತು.
ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ ಜೆ.ಎಸ್. ಉದ್ಘಾಟಿಸಿ ಮಾತನಾಡಿ, ಕೇವಲ ಪುಸ್ತಕದ ಓದು ಕಲಿಕೆಯಲ್ಲ. ಜೀವನ ಮೌಲ್ಯದ ಅರಿವು ಪಡೆಯುವುದು ಮುಖ್ಯ ಎಂದರು. ಉಪಾಧ್ಯಕ್ಷೆ ರಮ್ಲಾ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪಂ. ಸದಸ್ಯ ಬಟ್ಟು ಶೆಟ್ಟಿ, ನಾಲಂದ ಕಾಲೇಜು ಆಡಳಿತ ಮಂಡಳಿ ಖಜಾಂಚಿ ಶಶಿಭೂಷಣ ಶಾಸ್ತ್ರಿ ಮುಖ್ಯ ಅತಿಥಿಗಳಾಗಿ ಭಾಗವಸಿದ್ದರು.
ಗ್ರಾಪಂ ಅಬಿವೃದ್ದಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಎ.ಕುಲಾಲ್, ವಾರ್ಡ್ ಸದಸ್ಯೆ ರೂಪವಾಣಿ ಆರ್.ಭಟ್, ಆಯೋಜನಾ ಮಂಡಳಿ ಅಧ್ಯಕ್ಷ ಶ್ರೀಹರಿ ಭಟ್ ಕಜಂಪಾಡಿ, ಪ್ರಾಂಶುಪಾಲ ಶಂಕರ ಖಂಡಿಗೆ, ಮುಖ್ಯ ಶಿಕ್ಷಕ ಮಂಜುನಾಥ ಬಿ., ಪಿಟಿಎ ಅಧ್ಯಕ್ಷೆ ಗೀತ ಪಿ., ಉಪಾಧ್ಯಕ್ಷ ಪುಟ್ಟಪ್ಪ ಕೆ., ಕುಟುಂಬಶ್ರೀ ಸಿಡಿಎಸ್ ಸದಸ್ಯೆ ಉದಯ ಕುಮಾರಿ, ಜಯಲಕ್ಷ್ಮಿ, ಆಶಾ ಕಾರ್ಯಕರ್ತೆಯರಾದ ಜಾನಕಿ, ಪುμÁ್ಪವತಿ, ಎನ್ನೆಸ್ಸೆಸ್ ಕಾರ್ಯದರ್ಶಿ ಹರ್ಷಿತಾ, ಶಾಲಾ ಕಾಲೇಜು ಶಿಕ್ಷಕ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಎನ್ನೆಸ್ಸೆಸ್ ಯೋಜನಾಧಿಕಾರಿ ವರ್ಷಿತ್ ಕೆ.ಸ್ವಾಗತಿಸಿದರು. ವಿದ್ಯಾರ್ಥಿ ಹಾರ್ಥಿಕ್ ವಂದಿಸಿದರು. ಮ್ಯಾನೇಜ್ಮೆಂಟ್ ವಿಭಾಗದ ಉಪನ್ಯಾಸಕಿ ಅನುಪಮ ನಿರೂಪಿಸಿದರು.