ಪೆರ್ಲ: ಎಡನೀರು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಗಳು ಭಾನುವಾರ ಬೆಳಗ್ಗೆ ವಾಣಿನಗರ ಕುತ್ತಾಜೆ ವಸತಿ ಪ್ರದೇಶದಲ್ಲಿ ಪಾದಯಾತ್ರೆ ನಡೆಸಿ 30ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು.
ಎಲ್ಲ ಮನೆಯವರು ಸ್ವಾಮೀಜಿಗಳನ್ನು ತುಳಸಿ ಮಾಲೆ ಅರ್ಪಿಸಿ ಸ್ವಾಗತಿಸಿದರು. ಎಲ್ಲ ಮನೆಗಳಲ್ಲಿ ಧರ್ಮದ ಜ್ಯೋತಿ ಬೆಳಗಲಾಯಿತು.
ಧರ್ಮ ಜಾಗರಣ ಕಾಸರಗೋಡು ಜಿಲ್ಲಾ ಸಂಯೋಜಕ ತಿಮ್ಮಪ್ಪ ಮೀಯಪದವು, ಜಿಲ್ಲಾ ಕಾರ್ಯವಾಹಕ್ ಪವಿತ್ರನ್ ಕುದುರೆಪ್ಪಾಡಿ, ಜಿಲ್ಲಾ ಸಂಪರ್ಕ ಪ್ರಮುಖ್ ಕೃಷ್ಣರಾಜ ಪೆರ್ಲ, ಬದಿಯಡ್ಕ ಖಂಡ ಪರ್ಯಾವರಣ ಪ್ರಮುಖ್ ಜಗದೀಶ್ ಕುತ್ತಾಜೆ, ಸೇವಾ ಪ್ರಮುಖ್ ಗಣೇಶ್ ಪೆರ್ಲ, ಬದಿಯಡ್ಕ ಖಂಡ ಕಾರ್ಯವಾಹಕ್ ನವೀನ ಏಣಿಯರ್ಪು, ಪತ್ತಡ್ಕ ರಾಧಾಕೃಷ್ಣ ಭಟ್, ರಾಜರಾಂ ಪತ್ತಡ್ಕ, ಗ್ರಾಮ ವಿಕಾಸ ಸಂಯೋಜಕ್ ವಿಜಯ್ ಅಳ್ವ, ರಾಮಕೃಷ್ಣ ಕಡಂಬಳಿತ್ತಾಯ, ಕೃಷ್ಣಕುಮಾರ್ ನೆಕ್ಕರೆಕಾಡು, ಶ್ರೀನಿವಾಸ ಭಟ್, ಗೋವಿಂದ ಭಟ್ ಅಜಕ್ಕಳಮೂಲೆ, ಜಯಶಂಕರ ಆಚಾರ್ಯ, ಮಹೇಶ್ ವಳಕ್ಕುಂಜ, ಸತೀಶ್ ರಾವ್ ಎಡನೀರು, ರಾಮಕೃಷ್ಣ ಮತ್ತಿತರರಿದ್ದರು. ವಾಣೀನಗರ ಭಜನಾ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು ಎಲ್ಲರಿಗೂ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು.